ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀಕೃಷ್ಣನ್ ಹರಿಹರ ಶರ್ಮಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ತಮ್ಮ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ.
ಇಬ್ಬರೂ ವೈಯಕ್ತಿಕ ವಿಷಯಕ್ಕೆ ರಾಜೀನಾಮೆ ಸಲ್ಲಿಸಿದ್ದರು, ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಊಹಾಪೋಹಗಳು ಠೇವಣಿದಾರನನ್ನು ಆತಂಕಕ್ಕೀಡುಮಾಡಿವೆ.
ಬ್ಯಾಂಕಿನ ಸಾಮಾನ್ಯ ವ್ಯವಹಾರಗಳು ಎಂದಿನಂತೆ ನಡೆಯಲು ಬೇಕಾಗುವ ಎಲ್ಲಾ ಕ್ರಮ ಕೈಗೊಂಡಿರುವುದಾಗಿ ಬ್ಯಾಂಕಿನ ಆಡಳಿತ ಮಂಡಳಿ ಪ್ರಕಟಣೆ ನೀಡಿದ್ದಾರೆ. ಆದರೂ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ತರಾವರಿ ಚರ್ಚೆಗಳು ನಡೆಯುತ್ತಿದ್ದು ಠೇವಣಿದಾರರು ಹೈರಾಣಾಗಿದ್ದಾರೆ.
ಸುದ್ದಿ ತಿಳಿದ ಕೆಲವಷ್ಟು ಠೇವಣಿದಾರರು ವಿವಿಧ ಬ್ರಾಂಚ್ ಗಳಲ್ಲಿ ಜಮಾಯಿಸಿರುವ ಮಾಹಿತಿಯೂ ಇದ್ದು, ಬ್ಯಾಂಕ್ ಈ ಕೂಡಲೇ ಎಲ್ಲಾ ಠೇವಣಿದಾರರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.

