ಕುಂದಾಪುರ: ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಭಜನಾ ಒಕ್ಕೂಟದಿಂದ ಸ್ಥಾಪನೆಯಾದ ಲಕ್ಷ್ಮಿ ಶ್ರೀನಿವಾಸ ಕ್ರೆಡಿಟ್ ಸಹಕಾರ ಸಂಘ (ನಿ) ಕುಂದಾಪುರದಲ್ಲಿ ಶುಭಾರಂಭಗೊಂಡಿತು.
ಕುಂದಾಪುರದ ಮೀನುಮಾರುಕಟ್ಟೆ ರಸ್ತೆಯಲ್ಲಿಯಲ್ಲಿರುವ ನಾಗ ಬೊಬ್ಬರ್ಯ ದೇವಸ್ಥಾನದ ಹತ್ತಿರ ಇರುವ ಕೆರಾಡಿ ಕಾಂಪ್ಲೆಕ್ಸ್ ನಲ್ಲಿ ಸಂಘದ ಕಚೇರಿ ಶುಭಾರಂಭಗೊಂಡಿತು.

ರಾಜ್ಯದ ಇತಿಹಾಸದಲ್ಲೇ ಮೊದಲೆಂಬಂತೆ ಭಜನಾ ಒಕ್ಕೂಟವೊಂದರಿಂದ ಪ್ರಾರಂಭವಾದ ಮೊದಲ ಸಹಕಾರಿ ಸಂಘ ಇದಾಗಿದ್ದು ಎಲ್ಲರಿಗೂ ಮಾದರಿಯಾಗಿದೆ .

ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶ್ರೀ ನಿತಿನ್ ವಿಠಲವಾಡಿ , ಉಪಾಧ್ಯಕ್ಷರಾಗಿ ಶ್ರೀಮತಿ ಸುಶೀಲ ಎ ಶೆಟ್ಟಿ ಜನ್ನಾಡಿ, ನಿರ್ದೇಶಕರಾಗಿ ಶ್ರೀ ಚಂದ್ರಶೇಖರ್ ಶೆಟ್ಟಿ, ಶ್ರೀಮತಿ ಸರೋಜ ವಿಷ್ಣುಮೂರ್ತಿ, ಶ್ರೀ ಎ ಸುಕುಮಾರ್ ಶೆಟ್ಟಿ, ಶ್ರೀಮತಿ ಪ್ರೀತಿ ಅಜಯ್ ಹವಾಲ್ದಾರ್, ಶ್ರೀ ಸಂತೋಷ್ ಶೆಟ್ಟಿ, ಶ್ರೀಮತಿ ಭಾನುಮತಿ ಬಿ.ಕೆ, ಶ್ರೀ ಅಣ್ಣಯ್ಯ ಖಾರ್ವಿ, ಶ್ರೀಮತಿ ವನಿತಾ ಆರ್ ಹವಾಲ್ದಾರ್, ಶ್ರೀ ಮುರಳೀಧರ್ ಶೆಟ್ಟಿ, ಸುಬ್ರಹ್ಮಣ್ಯ ಬಡಾಕೆರೆ, ಶ್ರೀ ಜಗದೀಶ್ ಪೂಜಾರಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


