ಮಣಿಪಾಲ : ಮನೆಯಲ್ಲಿ ಯಾರಿಲ್ಲದ ಸಮಯದಲ್ಲಿ ವೃದ್ಧರೊಬ್ಬರು ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರದಂದು ಮಣಿಪಾಲ ಪೋಲಿಸ್ ಠಾಣೆ ವ್ಯಾಪ್ತಿಯ ಕರ್ವಾಲು ಎಂಬಲ್ಲಿ ನಡೆದಿದೆ.
ಮೃತರನ್ನು ಚಂದು ದೇವಾಡಿಗ (75ವ) ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮಣಿಪಾಲ ಪೊಲೀಸ್ ಠಾಣೆಯ ಎಎಸ್ಐ ಮನೋಹರ್, ಮುಖ್ಯ ಆರಕ್ಷಕರಾದ ಸುರೇಶ್ ಶೆಟ್ಟಿ , ಜ್ಯೋತಿ ಮಹಜರು ಪ್ರಕ್ರಿಯೆ ನಡೆಸಿದರು.
ಶವವನ್ನು ಕೆಎಂಸಿ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಉಚಿತ ಆಂಬುಲೆನ್ಸ್ ಸೇವೆ ಒದಗಿಸಿದರು. ಶ್ರೀಕಾಂತ್ ನಾಯ್ಕ್ ಸಹಕರಿಸಿದ್ದರು.

