ಭಾರತೀಯರಲ್ಲಿ ಹೃದಯಾಘಾತದ ಭಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೊದಲು ಮದ್ಯವಯಸ್ಕರು, ಹಿರಿಯರಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೃದಯದ ಸಮಸ್ಯೆಗಳು ಈ ಯುವಕರು ಮತ್ತು ಮಕ್ಕಳಲ್ಲಿ ಕೂಡ ಅತಿಯಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಆಧುನಿಕ ಜೀವನ ಶೈಲಿ, ಆಹಾರ ಪದ್ದತಿಗಳು ಕಾರಣವಾಗಿದ್ದು ಅದನ್ನು ಸುಧಾರಿಸಿಕೊಳ್ಳುವುದು ತುಂಬಾ ಮುಖ್ಯ.
ಹೃದಯಾಘಾತದ ಬಗ್ಗೆ ಆತಂಕ ಇರುವವರು ಕೆಲವು ತುರ್ತು ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡಿರಲೇ ಬೇಕಿರಿವುದು ಅತ್ಯವಶ್ಯಕ.
ಹೃದಯಾಘಾತದ ಲಕ್ಷಣಗಳು:
ಎಲ್ಲದಕ್ಕಿಂತಲೂ ಮೊದಲು ಅದು ಹೃದಯಾಘಾತವೋ ಅಲ್ಲವೋ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹೃದಯಾಘಾತವೆಂದರೆ ಎದೆಯಲ್ಲಿ ನೋವು ಮತ್ತು ಒತ್ತಡ ಉಂಟಾಗುತ್ತದೆ. ಈ ನೋವು ಎದೆಯಿಂದ ಪ್ರಾರಂಭವಾಗಿ ನಂತರ ಭುಜ, ದವಡೆ ಹಾಗೂ ಬೆನ್ನಿಗೆ ಆವರಿಸುತ್ತದೆ. ಉಸಿರಾಟದ ತೊಂದರೆ ಜೊತೆಗೆ ಮೈ ಬೆವರಲು ಪ್ರಾರಂಭವಾಗುತ್ತದೆ. ಇವುಗಳು ಹೃದಯಾಘಾತದ ಸಾಮಾನ್ಯ ಲಕ್ಷಣಗಳು.
ಕೆಲವು ತುರ್ತು ಪ್ರಥಮ ಚಿಕಿತ್ಸೆಗಳು
ಆಸ್ಪಿರಿನ್ ಮಾತ್ರೆ
ತಜ್ಞರ ಪ್ರಕಾರ ಹೃದಯಾಘಾತದ ಸಂದರ್ಭದಲ್ಲಿ ಆಸ್ಪಿರಿನ್ ಮಾತ್ರೆಯು ಅತ್ಯಂತ ಉಪಯುಕ್ತಕರ. ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಈ ಮಾತ್ರೆಯನ್ನು ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇದೆ. ಹೃದಯಾಘಾತದ ಅಪಾಯದ ಮುನ್ಸೂಚನೆ ಸಿಕ್ಕ ತಕ್ಷಣ ಈ ಮಾತ್ರೆಯನ್ನು ತೆಗೆದುಕೊಳ್ಳಿ. ಆಸ್ಪಿರಿನ್ ಮಾತ್ರೆಯು ರಕ್ತ ಹೆಪ್ಪುಗಟ್ಟುವಿಕೆಯ ಪ್ರಮಾಣವನ್ನು ತಗ್ಗಿಸುತ್ತದೆ ಮತ್ತು ರಕ್ತವು ಹೃದಯವನ್ನು ಸುಲಭವಾಗಿ ತಲುಪುತ್ತದೆ.
ಕಫ್ CPR:
ತಜ್ಞರ ಪ್ರಕಾರ, ಯಾವುದೇ ವ್ಯಕ್ತಿಗೆ ಹೃದಯಾಘಾತವಾದರೆ ತಕ್ಷಣ CPR ಪ್ರಾರಂಭಿಸಬೇಕು. CPR ನಲ್ಲಿ ವ್ಯಕ್ತಿಯು ಬಲವಾಗಿ ಉಸಿರಾಡಬೇಕು ಮತ್ತು ಕೆಮ್ಮಲು ಪ್ರಾರಂಭಿಸಬೇಕು. ಹೀಗೆ ಮಾಡುವುದರಿಂದ ಹೃದಯದ ಮೇಲೆ ಒತ್ತಡ ಬಿದ್ದು ದೇಹಕ್ಕೆ ರಕ್ತ ಪೂರೈಕೆಯನ್ನು ಕಾಯ್ದುಕೊಳ್ಳುತ್ತದೆ. ನಿಮಗೆ ಪ್ರಥಮ ಚಿಕಿತ್ಸೆ ಸಿಗುವವರೆಗೆ ಅಥವಾ ಯಾರಾದರೂ ನಿಮಗೆ CPR ನೀಡುವವರೆಗೆ ಅದನ್ನು ಮಾಡಬೇಕು.

