ಕರಾವಳಿಗರ ಹಲವು ದಶಕಗಳ ಕನಸೊಂದು ನನಸಾಗಿದ್ದು ಉಡುಪಿ ಜಿಲ್ಲೆಯ ಎರಡನೇ ಕಾನೂನು ವಿದ್ಯಾಲಯ ಇದೀಗ ಕುಂದಾಪುರದಲ್ಲಿ ಪ್ರಾರಂಭವಾಗಿದೆ.
ಗುಣಮಟ್ಟದ ಶಿಕ್ಷಣಕ್ಕೆ ಅತ್ಯಂತ ಹೆಸರುವಾಸಿಯಾದ ಫೋರ್ಟ್ ಗೇಟ್ ಎಜುಕೇಶನ್ ಟ್ರಸ್ಟಿನ ಅಧೀನದಲ್ಲಿ ಓಕ್ ವುಡ್ ಲಾ ಸ್ಕೂಲ್ ಪ್ರಾರಂಭವಾಗಿದ್ದು, 3 ವರ್ಷದ ಎಲ್. ಎಲ್.ಬಿ ಕೋರ್ಸಿಗಾಗಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಆರಂಭವಾಗಿದೆ.
ಕಾನೂನು ಪದವಿ ಪಡೆಯುವ ನಿಮ್ಮ ಕನಸಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಕುಂದಾಪುರದ ಓಕ್ ವುಡ್ ಲಾ ಸ್ಕೂಲ್. ಇಲ್ಲಿ ಈಗಾಗಲೇ ನುರಿತ ಪ್ರಾಧ್ಯಾಪಕರ ತಂಡ ಸಿದ್ಧವಾಗಿದ್ದು, ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಮುಂದಿನ ಕಾನೂನು ವೃತ್ತಿ ಜೀವನಕ್ಕೆ ಅನುಕೂಲ ಆಗುವಂತೆ ಪೂರಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಹಾಗೆಯೇ ಅತ್ಯುತ್ತಮ ಕಾನೂನು ತಜ್ಞರಿಂದ ಕಾಲಕಾಲಕ್ಕೆ ಸೆಮಿನಾರ್ ಗಳನ್ನು ಏರ್ಪಡಿಸುವ ಉದ್ದೇಶವನ್ನು ಹೊಂದಿದೆ. ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮ ಗ್ರಂಥಾಲಯ ವ್ಯವಸ್ಥೆ, ಕಾನೂನು ಶಿಕ್ಷಣಕ್ಕೆ ಅತ್ಯವಶ್ಯಕವಾಗಿರುವ ಮೂಟ್ ಕೋರ್ಟ್ ಸೇರಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಈ ಶಿಕ್ಷಣ ಸಂಸ್ಥೆ ಹೊಂದಿದೆ. ಅಲ್ಲಿದೆ ದೂರದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕೂಡ ಈ ಶಿಕ್ಷಣ ಸಂಸ್ಥೆಯಲ್ಲಿ ಲಭ್ಯವಿದೆ.
ಈ ವಿದ್ಯಾ ಸಂಸ್ಥೆಯು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಇದರಿಂದ ಮಾನ್ಯತೆಯನ್ನು ಪಡೆದಿದೆ.
ಮೂರು ವರ್ಷದ ಕಾನೂನು ಪದವಿಗೆ ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದ್ದು ಹೆಚ್ಚಿನ ಮಾಹಿತಿಗಾಗಿ 8971460173, 9902650510 ಸಂಪರ್ಕಿಸಬಹುದು.


