ಬೆಂಗಳೂರು: 2026-27 ನೇ ಸಾಲಿಗೆ 1 ನೇ ತರಗತಿಯ ದಾಖಲಾತಿಗೆ ಕಾದು ಕುಳಿತ್ತಿದ್ದ ಪೋಷಕರಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, ದಾಖಲಾತಿಗೆ ಆರು ವರ್ಷದ ಮಿತಿ ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಮಹತ್ವದ ಘೋಷಣೆ ಮಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದನೇ ತರಗತಿಯ ದಾಖಲಾತಿಗೆ ಇದ್ದ ಆರು ವರ್ಷದ ಮಿತಿಯನ್ನು ಎರಡು ತಿಂಗಳು ಸಡಿಲಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

