ಬ್ರಹ್ಮಾವರ: ಸಾಸ್ತಾನದ ಗರಡಿ ರಸ್ತೆಯಲ್ಲಿರುವ ಸೊಸೈಟಿ ಸಮೀಪ ನಡೆಯುತ್ತಿದ್ದ ಮಟ್ಕಾ ಜುಗಾರಿ ಅಡ್ಡೆಗೆ ಕೋಟ ಪೊಲೀಸರು ದಾಳಿ ನಡೆಸಿದ್ದಾರೆ.
ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಸಾಸ್ತಾನ ಗರಡಿ ರಸ್ತೆಯಲ್ಲಿರುವ ಕೋಟ ಸಿ ಎ ಬ್ಯಾಂಕ್ ಶೇಂದಿ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಮಹಾಬಲ ಪೂಜಾರಿ ಎಂಬವನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ತಾನು ವಿಠಲ ದೇವಾಡಿಗ ಪಾಂಡೇಶ್ವರ ಎಂಬವನು ತಿಳಿಸಿದಂತೆ ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದು ಇದರಿಂದ ಬಂದ ಹಣವನ್ನು ವಿಠಲ ದೇವಾಡಿಗ ಪಾಂಡೇಶ್ವರ ಈತನಿಗೆ ನೀಡುತ್ತಿದ್ದು ಆತನು ತನಗೆ ಕಮೀಷನ್ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ .
ಮಹಾಬಲ ಪೂಜಾರಿಯು ಲಘು ಸಂಘಟಿತವಾಗಿ ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದರಿಂದ ಆತನನ್ನು ಹಾಗೂ ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಬಾಲ್ ಪೆನ್ ,ಮಟ್ಕಾ ಚೀಟಿ ನಗದು 940/- ರೂಪಾಯಿಯನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 50/2026 ಕಲಂ: 78(i)(iii) KP ACT ಮತ್ತು ಕಲಂ112 ಜೊತೆಗೆ 3(5) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.

