ಬ್ರಹ್ಮಾವರ: ತಮ್ಮ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕೈಂಕರ್ಯಗಳ ಮೂಲಕ ಕರಾವಳಿಯಾದ್ಯಂತ ಮನೆ ಮಾತಾಗಿರುವ ಹೆಮ್ಮೆಯ ಸಂಸ್ಥೆ ಕೋಡಿ ಹೊಸಬೆಂಗ್ರೆಯ ಧಕ್ಕೆ ಫ್ರೆಂಡ್ಸ್ ಇವರ ಅದ್ಧೂರಿ ಹದಿನೈದನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ “ 15 ರ ಸಂಭ್ರಮ “ ದಿನಾಂಕ 05-04-2026 ರ ಭಾನುವಾರ ಕೋಡಿ ಕನ್ಯಾನದ ಶ್ರೀ ರಾಮ ದೇಗುಲದ ಸಮೀಪ ಜರುಗಲಿದೆ.
ಸಂಸ್ಥೆಯ 15 ನೇ ವರ್ಷದ ವಾರ್ಷಿಕೋತ್ಸದ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ , ಅಶಕ್ತರಿಗೆ ಸಹಾಯಧನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಸಮಾರಂಭದ ಭವ್ಯ ವೇದಿಕೆಯಲ್ಲಿ ಸಮಾಜ ಸೇವಕರು ಮುಳುಗು ತಜ್ಞ ಶ್ರೀ ಈಶ್ವರ ಮಲ್ಪೆ, ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಪಟು ಮಿಹಿರ್ ಮುಕುಲ್ ಕರ್ಕೇರ ಮತ್ತು ರಾಷ್ಟ್ರ ಮಟ್ಟದ ಕರಾಟೆ ಪಟು ಧನ್ವಿ ಜೆ ಅಮೀನ್ ಅವರನ್ನು ಸನ್ಮಾನಿಸಲಾಗುವುದು.
ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಕ್ಕೆ ಫ್ರೆಂಡ್ಸ್ ಅಧ್ಯಕ್ಷರಾದ ಶ್ರೀ ಅಲೋಕ್ ವಹಿಸಿಕೊಳ್ಳಲಿದ್ದು , ಭವ್ಯ ವೇದಿಕೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಗಣೇಶ್ ಕುಂದರ್, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಶ್ರೀ ಆನಂದ್ ಸಿ ಕುಂದರ್ , ಶಾಸಕರಾದ ಕಿರಣ್ ಕೊಡ್ಗಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಸಂಸದರ ಆಪ್ತ ಕಾರ್ಯದರ್ಶಿ ಶ್ರೀ ಹರೀಶ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ PDO ರವೀಂದ್ರ ರಾವ್, ಜ್ಯೋತಿಷಿ – ದಾನಿಗಳಾದ ಮಾಧವ ಉಪಾಧ್ಯಾಯ, ಕೋಡಿ ಶ್ರೀ ರಾಮ ದೇಗುಲದ ಅಧ್ಯಕ್ಷರಾದ ರಾಘವೇಂದ್ರ ಕರ್ಕೇರ , ಮುಳುಗು ತಜ್ಞ ಈಶ್ವರ ಮಲ್ಪೆ, ಅಭಿಜಿತ್ ಪಾಂಡೇಶ್ವರ, ಶ್ರೀ ಸುಭಾಸ್ ಶೆಟ್ಟಿ, ಜ್ಯೋತಿ ಉದಯ ಪೂಜಾರಿ ಮತ್ತು ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಖಾರ್ವಿ ಉಪಸ್ಥಿತಲಿದ್ದಾರೆ.

15ರ ಸಂಭ್ರಮದ ಪ್ರಯುಕ್ತ ರಾತ್ರಿ 7.30 ರಿಂದ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ತಂಡ ಸ್ಟೆಪ್ & ಸ್ಟೈಲ್ ಡಾನ್ಸ್ ಸ್ಟುಡಿಯೋ ಸಾಸ್ತಾನದವರಿಂದ ಅದ್ಧೂರಿ ಡ್ಯಾನ್ಸ್ ಕಾರ್ಯಕ್ರಮ “ ಡ್ಯಾನ್ಸ್ ಧಮಕಾ” ನಡೆಯಲಿದೆ.
ಜೊತೆಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ರಾತ್ರಿ 9.30 ರಿಂದ ಮಂಗಳೂರಿನ ಸಾಯಿ ಶಕ್ತಿ ಬಳಗದವರಿಂದ ಅದ್ಧೂರಿ ಕನ್ನಡ ಜನಪದ ಸಿನಿನಾಟಕ “ ಜೋಡು ಜೀಟಿಗೆ “ ಪ್ರದರ್ಶನಗೊಳ್ಳಲ್ಲಿದೆ.

