ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿರುವ ಶ್ರೀ ದೇವಿ ಶಿಕ್ಷಣ ಸಂಸ್ಥೆ (Sri Devi Group of Institutions) ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದೆ. ಈ ಸಂಸ್ಥೆಯು ಮುಖ್ಯವಾಗಿ ವೈದ್ಯಕೀಯ ಮತ್ತು ಅರೆವೈದ್ಯಕೀಯ (Paramedical) ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುತ್ತಿದೆ.
ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೊನ್ನಾವರ ಇದರ ಅಧೀನಕ್ಕೆ ಒಳಪಟ್ಟಿರುವ ಪ್ರತಿಷ್ಠಿತ ಕಾಲೇಜು ಅಂದರೆ ಶ್ರೀದೇವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್. ಶಿಸ್ತು ಬದ್ಧ ಜೀವನಕ್ಕೆ, ವೃತ್ತಿಪರ ಮಾರ್ಗೋಪಾಯಕ್ಕೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ದಾಪುಗಾಲಿಡುತ್ತಾ ಈ ಸಂಸ್ಥೆಯು ಇದೀಗ ನಾಲ್ಕನೇ ವರ್ಷಕ್ಕೆ ಹೆಜ್ಜೆ ಇಟ್ಟಿದೆ.

ಹೊನ್ನಾವರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬೆಂಗಳೂರು ಅಥವಾ ಮಂಗಳೂರಿನಂತಹ ದೊಡ್ಡ ನಗರಗಳಿಗೆ ಹೋಗದೆ, ಸ್ವಂತ ಜಿಲ್ಲೆಯಲ್ಲೇ ಗುಣಮಟ್ಟದ ತಾಂತ್ರಿಕ ಶಿಕ್ಷಣ ಪಡೆಯಲು ಈ ಸಂಸ್ಥೆ ನೆರವಾಗಿದೆ. ಅಲ್ಲದೆ, ಇಲ್ಲಿನ ಆಸ್ಪತ್ರೆಯ ಮೂಲಕ ಕಡಿಮೆ ವೆಚ್ಚದಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ.
ಹೊನ್ನಾವರದಲ್ಲಿ ಇರುವ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಶ್ರೀದೇವಿ ಕಾಲೇಜ್ ಶೈಕ್ಷಣಿಕ ವಿಷಯದಲ್ಲೂ ವಿಭಿನ್ನ ಪಾತ್ರ ವಹಿಸಿದ ಹೆಮ್ಮೆಯ ಶಿಕ್ಷಣ ಸಂಸ್ಥೆ. ಶ್ರೀದೇವಿ ಮೆಡಿಕಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ) ಅಂಗವಾಗಿರುವ ಇಲ್ಲಿ ಪ್ರಸಕ್ತ ಸಾಲಿನಲ್ಲಿ ಬಿಎಸ್ಸಿ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕೋರ್ಸ್ ಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ.
ಬಿ ಎಸ್ ಸಿ ನರ್ಸಿಂಗ್, ಡಿಪ್ಲೋಮಾ ಇನ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೋಮೋ ಇನ್ ಆಪರೇಷನ್ ಪೇಪರ್ ಟೆಕ್ನಿಷಿಯನ್ ಮತ್ತು ಅನಸ್ತೇಶಿಯ ಟೆಕ್ನಿಷಿಯನ್, ಡಿಪ್ಲೋಮೋ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಹಾಗೂ ಡಿಪ್ಲೋಮೋ ಇನ್ ಡಯಾಲಿಸಿಸ್ ಟೆಕ್ನಾಲಜಿ ಇತ್ಯಾದಿ ನಾಲ್ಕು ವರ್ಷ ಹಾಗೂ ಮೂರು ವರ್ಷದ ಕೆಲವೇ ಸೀಟುಗಳು ಲಭ್ಯವಿದ್ದು ಆಸಕ್ತರು ಶೀಘ್ರದಲ್ಲೇ ದಾಖಲಾತಿ ಮಾಡಿಕೊಳ್ಳಿ.
ಶ್ರೀದೇವಿ ಕಾಲೇಜಿನ ವಿಶೇಷತೆ ಏನೆಂದರೆ ಇಲ್ಲಿ ನುರಿತ ಹಾಗೂ ಅನುಭವ ಹೊಂದಿರುವ ಪರಿಣಿತ ಹೊಂದಿರುವ ಉಪನ್ಯಾಸಕರ ತಂಡವಿದ್ದು. ಆಧುನಿಕ ತರಗತಿಯ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯ, ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾದ ಹಾಸ್ಟೆಲ್ ಸೌಲಭ್ಯ, ಹಾಗೂ ಕಾಲೇಜ್ ಬಸ್ಸಿನ ವ್ಯವಸ್ಥೆ ಕೂಡ ಇರುತ್ತದೆ.
ಇದರ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಕಾಲರ್ಶಿಪ್ ವ್ಯವಸ್ಥೆ ಹಾಗೂ ನೂರು ಶೇಕಡ ಉದ್ಯೋಗ ಅವಕಾಶ. ಆಧುನಿಕ ಲ್ಯಾಬೋರೇಟರಿ ತರಬೇತಿ, ಶಿಕ್ಷಣಕ್ಕೆ ಬ್ಯಾಂಕ್ ಲೋನ್, ತಜ್ಞ ವೈದ್ಯರಿಂದ ಪ್ರಾಯೋಗಿಕ ಶಿಕ್ಷಣ ಮುಂತಾದ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬಹುದು.
ಹಾಗೂ ತನ್ನದೇ ( ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ) ಆದ 105 ಬೆಡ್ ಆಸ್ಪತ್ರೆಯೂ ಹೊಂದಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣಕ್ಕೆ ಇನ್ನೂ ಉನ್ನತ ಮಟ್ಟದ ಕಲಿಕೆಗೆ ಇದು ಹೆಗ್ಗಳಿಕೆ ತಂದುಕೊಡುತ್ತದೆ.
ಉತ್ತಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಇಲ್ಲಿ ಅನೇಕ ರೀತಿಯ ಆಯ್ಕೆಗಳಿವೆ. ಪ್ರಬುದ್ಧ ಗುಣಮಟ್ಟದ ಶಿಕ್ಷಣಕ್ಕಾಗಿ ಇಂದೇ ಭೇಟಿ ನೀಡಿ ಶ್ರೀದೇವಿ ಆರೋಗ್ಯ ವಿಜ್ಞಾನ ಕಾಲೇಜ್ ಬಂದರ್ ರಸ್ತೆ ಹೊನ್ನಾವರ ತಾಲೂಕು ಕಾರವಾರ ಜಿಲ್ಲೆ.
ಹೆಚ್ಚಿನ ಮಾಹಿತಿಗಾಗಿ 8197861666 ಈ ನಂಬರಿಗೆ ಇಂದೇ ಸಂಪರ್ಕಿಸಿ.
ವಿಶೇಷ ಸೂಚನೆ : 10/05/2026 ರಿ ಒಳಗಡೆ ಬಂದ ವಿದ್ಯಾರ್ಥಿಗಳಿಗೆ 10,000/- ವಿದ್ಯಾರ್ಥಿ ವೇತನವನ್ನು ಕೊಡಲಾಗುವುದು. ಇದನ್ನು ಆದಷ್ಟು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.

