ಬೆಂಗಳೂರು: ಕನ್ನಡದ ಬಿಗ್ಬಾಸ್ ಸೀಜನ್ 13 ನ ಅಧಿಕೃತ ಪ್ರೋಮೊ ಬಿಡುಗಡೆಯಾಗಿದ್ದು, ಬಿಗ್ಬಾಸ್ ಅಭಿಮಾನಿಗಳ ಸಂತಸ ಹೆಚ್ಚಿಸಿದೆ. ಪ್ರೊಮೋಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೆ. 5 ರಿಂದ ಬಿಗ್ಬಾಸ್ ಮತ್ತೆ ಆರಂಭವಾಗಲಿದೆ.
ಈ ಬಾರಿಯ ಬಿಗ್ಬಾಸ್ನಲ್ಲಿ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಈಗಾಗಲೇ ಆಡಿಷನ್ ಕೆಲಸ ಪೂರ್ಣವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ಬಾಸ್ 13 ಪ್ರೇಕ್ಷಕರನ್ನು ಮನರಂಜಿಸಲು ಬರಲಿದೆ. ಯಾರೆಲ್ಲಾ ಸ್ಪರ್ಧಿಗಳು ಎನ್ನುವ ಕುತೂಹಲಕ್ಕೆ ಗ್ರ್ಯಾಂಡ್ ಪ್ರೀಮಿಯರ್ನಲ್ಲಿ ಉತ್ತರ ದೊರೆಯಲಿದೆ.
ಸ್ಟೈಲಿಶ್ ಲುಕ್ಕಿನಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚನ ಡೈಲಾಗ್ಗೂ ಅಭಿಮಾನಿ ಬಳಗ ಜೈ ಹೋ ಬಂದಿದೆ. ಕರ್ನಾಟಕದ ಜನ ಯಾರಿಗೂ ಕಾಯೋದಿಲ್ಲ… ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು… ಮತ್ತೆ ಶುರು ಮಾಡೋಣ್ವಾ ಎಂದು ಕಿಚ್ಚ ಬಿಗ್ಬಾಸ್ 13 ಗೆ ವೆಲ್ಕಮ್ ಮಾಡಿದ್ದಾರೆ.
ಒಟ್ಟಿನಲ್ಲಿ ಬಿಗ್ಬಾಸ್ ಯಾವಾಗ ಪ್ರಸಾರ ಆಗುತ್ತೋ ಎಂದು ಆ ಕಾರ್ಯಕ್ರಮದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

