ಬೆಂಗಳೂರು: ಪನೀರ್ ಸೇರಿದಂತೆ ಇತರ ಆಹಾರ ವಸ್ತುಗಳ ಕೃತಕ ಉತ್ಪಾದನೆ ಮತ್ತು ಮಾರಾಟ ಕಾನೂನಾತ್ಮಕವಾಗಿ ನಿಷೇಧವಾಗಿದ್ದು, ಈ ನೀತಿಯನ್ನು ಉಲ್ಲಂಘಿಸುವ ಯಾವುದೇ ಸಂಸ್ಥೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಸಚಿವ ಯು. ಟಿ. ಖಾದರ್ ನೀಡಿದ್ದಾರೆ.
ಕೃತಕವಾಗಿ ಚೀಸ್, ಪನ್ನೀರ್, ಬೆಣ್ಣೆ ಮಾತ್ರಲ್ಲ ಯಾವುದೇ ಆಹಾರ ವಸ್ತುಗಳನ್ನು ಉತ್ಪಾದಿಸಲು, ಮಾರಾಟ ಮಾಡಲು ರಾಜ್ಯದ ಕಾನೂನಿನಲ್ಲಿ ಅವಕಾಶವಿಲ್ಲ. ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳನ್ನು ಆಹಾರ ತಯಾರಿಕೆಯಲ್ಲಿ ಬಳಸುವುದು ನಿಷೇಧಿಸಲಾಗಿದೆ. ಅಂತಹ ಯಾವುದೇ ಆಹಾರ ಪದಾರ್ಥಗಳನ್ನು ಕೃತಕವಾಗಿ ಉತ್ಪಾದಿಸಿ ಮಾರಾಟ ಮಾಡುತ್ತಿವುದು ಕಂಡುಬಂದರೆ ಅಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ಸಂಬಂಧ ಮತ್ತೊಂದು ವಿಶೇಷ ಆದೇಶವನ್ನೂ ಶೀಘ್ರ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರ ಆರೋಗ್ಯ ನಮ್ಮ ಆದ್ಯತೆ. ಆದ್ದರಿಂದ ಯಾವುದೇ ಆಹಾರ ಮಾರಾಟ ಮಾಡುವ ಸ್ಟಾರ್ ಹೊಟೇಲ್, ಸಾಮಾನ್ಯ ಹೊಟೇಲ್, ಕ್ಯಾಂಟೀನ್ಗಳು ಗುಣಮಟ್ಟದ ಆರೋಗ್ಯಪೂರ್ಣ ಆಹಾರ ನೀಡಬೇಕು. ಇದರ ಪರಿಶೀಲನೆಗಾಗಿಯೇ ಪರಿಶೀಲನೆ ನಡೆಸುತ್ತಿರುವುದು ಎಂದು ತಿಳಿಸಿದ್ದಾರೆ.

