ಬೇಸಿಗೆಯಲ್ಲಿ ವಿಪರೀತ ಬಿಸಿಲು, ಮಳೆ ಬಂದು ತಂಪಾಯ್ತು ಅಂದುಕೊಂಡರೆ ಮಳೆ ನಿಂತ ಬಳಿಕ ಮತ್ತೆ ಸೆಕೆ ಶುರು. ಇಂತಹ ಹವಾಮಾನ ವೈಪರೀತ್ಯದ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುದೊಡ್ಡ ಸವಾಲೇ ಸರಿ.
ಇಂತಹ ಸನ್ನಿವೇಶದಲ್ಲಿ ನಮ್ಮ ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಲು ‘ಎಳನೀರು’ ನಿಸರ್ಗದತ್ತವಾದ ಪರಿಹಾರ. ಪ್ರತಿನಿತ್ಯ ಎಳನೀರು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ. ಹಾಗೆಯೇ ಆ ಎಳನೀರಿಗೆ ಕಲ್ಲುಸಕ್ಕೆರ ಹಾಕಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಮತ್ತಷ್ಟು ಬೆನಿಫಿಟ್ಸ್ ಇದೆ ಎನ್ನುವುದು ಸತ್ಯ.
ದೇಹದಲ್ಲಿ ಉಷ್ಣತೆ ವಿಪರೀತ ಹೆಚ್ಚಾಗಿ ಕೆಲವರಿಗೆ ಬಾಯಿ ಹುಣ್ಣು, ಉರಿ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಎಳನೀರಿಗೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ದೇಹವನ್ನು ಶೀಘ್ರವಾಗಿ ತಂಪಾಗುತ್ತದೆ.
ಉರಿಮೂತ್ರ ಸಮಸ್ಯೆಗೂ ಕಲ್ಲು ಸಕ್ಕರೆ ಹಾಕಿದ ಎಳನೀರು ಬೆಸ್ಟ್ ಸೊಲ್ಯೂಷನ್. ಇದು ಮೂತ್ರಕೋಶಗಳಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊರಕ್ಕೆ ಹಾಕಲು ಸಹಾಯ ಮಾಡುತ್ತದೆ.
ಪೊಟಾಶಿಯಂ, ಮ್ಯಾಗ್ನೇಶಿಯಂ, ಕ್ಯಾಲ್ಸಿಯಂ ಅಂಶಗಳು ಎಳನೀರಿನಲ್ಲಿ ಹೇರಳವಾಗಿವೆ. ಉರಿ ಬಿಸಿಲಿನ ಸಮಯದಲ್ಲಿ ಬಳಲಿದ ದೇಹಕ್ಕೆ ಕಲ್ಲಿಸಕ್ಕರೆ ಹಾಕಿದ ಎಳನೀರು ತಂಪು. ದೇಹಕ್ಕೆ ಬೇಕಾದ ಗ್ಲುಕೋಸ್ ಒದಗಿಸುವ ಇದು ಮನಸ್ಸಿಗೂ ಚೈತನ್ಯ ನೀಡುತ್ತದೆ.
ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ತಪ್ಪಿಸುವುದಕ್ಕೂ ಎಳನೀರು ಸಹಕಾರಿ. ಇದು ಕಿಡ್ನಿಯಲ್ಲಿ ಹರಳುಗಳು ಜಮೆಯಾಗದಂತೆ ನೋಡಿಕೊಳ್ಳುತ್ತವೆ. ಸಣ್ಣ ಪುಟ್ಟ ಸ್ಟೋನ್ಗಳಿದ್ದರೆ ಅವುಗಳನ್ನು ಮೂತ್ರದ ಮೂಲಕ ಹೊರ ಹಾಕಲು ನೆರವಾಗುತ್ತದೆ. ಎದೆಯಿರಿ, ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರ ತಡೆಯುವುದಕ್ಕೂ ಎಳನೀರಿನೊಂದಿಗೆ ಬೆರೆತ ಕಲ್ಲು ಸಕ್ಕರೆ ನೀರು ರಾಮ ಬಾಣ.
ಬಹಳ ಮುಖ್ಯವಾಗಿ ಸೌಂದರ್ಯದ ಕಾಳಜಿ ವಹಿಸುವ ರು ಎಳನೀರಿಗೆ ಕಲ್ಲು ಸಕ್ಕರೆ ಹಾಕಿ ಸೇವನೆ ಮಾಡಿದರೆ ಚರ್ಮದ ಕಾಂತಿ ಹೆಚ್ಚುತ್ತದೆ. ಮೊಡವೆಗಳು ಕಡಿಮೆಯಾಗುತ್ತವೆ. ನೈಸರ್ಗಿಕವಾಗಿ ಸೌಂದರ್ಯ ಕಾಪಾಡಿಕೊಳ್ಳಲು ಕಲ್ಲು ಸಕ್ಕರೆ ಹಾಕಿದ ಎಳನೀರು ಸಹಾಯ ಮಾಡುತ್ತದೆ.

