ಪಡುಬಿದ್ರಿ: ಪಡುಬಿದ್ರಿ–ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಕಲ್ಲಂಗಡಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ.
ಅಪಘಾತದ ಪರಿಣಾಮ ಲಾರಿಯಲ್ಲಿದ್ದ ನೂರಾರು ಕಲ್ಲಂಗಡಿಗಳು ರಸ್ತೆಯ ಬದಿಗೆ ಚೆಲ್ಲಾಪಿಲ್ಲಿಯಾಗಿದ್ದು, ಹಲವು ಕಲ್ಲಂಗಡಿಗಳು ಒಡೆದುಹೋಗಿವೆ.
ಘಟನೆಯಲ್ಲಿ ಗಾಯಾಳುಗಳ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

