ಮಂಗಳೂರು: ಮೊಸರು ಕುಡಿಕೆ ಮಡಿಕೆ ಹೊಡೆಯುವ ವೇಳೆ ಚಪ್ಪರ ಮುರಿದು ಬಿದ್ದ ಘಟನೆ ಮಂಗಳೂರಿನ ಬಜಿಲಕೇರಿಯಲ್ಲಿ ನಡೆದಿದೆ.
ಮೊಸರು ಕುಡಿಕೆ ಉತ್ಸವದ ಅಂಗವಾಗಿ ಮಡಿಕೆ ಹೊಡೆಯುವ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಏಕಾಏಕಿ ಚಪ್ಪರ ಕುಸಿದು ಬಿದ್ದಿದೆ. ಚಪ್ಪರದ ಕೆಳಗೆ ಭಕ್ತರು ಹಾಗೂ ಸಾರ್ವಜನಿಕರು ಇದ್ದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಭಕ್ತರು ಹಾಗೂ ಸಾರ್ವಜನಿಕರು ಅಪಾಯದಿಂದ ಪಾರಾಗಿದ್ದಾರೆ.

