ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಹೆಸರಿನ ವಿಚಾರದಲ್ಲಿ ಉಂಟಾಗಿದ್ದ ಮತದಾರರ ಪಟ್ಟಿಯ ಗೊಂದಲಕ್ಕೆ ಚುನಾವಣಾ ಆಯೋಗ ತೆರೆ ಎಳೆದಿದೆ.
2002ರ ಮತದಾರರ ಪಟ್ಟಿಯಲ್ಲಿ ಕೇವಲ ‘ಹಾಜಬ್ಬ’ ಎಂದು ಹೆಸರು ದಾಖಲಾಗಿದ್ದರೆ, ಪ್ರಸ್ತುತ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ನಮೂದಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ನೋಟಿಸ್ ನೀಡಿದ್ದ ಅಧಿಕಾರಿಗಳು, ಅದೇ ದಿನ ದಾಖಲೆಗಳನ್ನು ಪರಿಶೀಲಿಸಿ ಹೆಸರನ್ನು ಸರಿಪಡಿಸಿದ್ದಾರೆ.
ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದ ಕೊಡುಗೆಗಾಗಿ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

