ಮುಂಬೈ: ಜಿಯೋ ಬಳಕೆದಾರರಿಗೆ ಕಂಪನಿಯು ಹೊಸ ಆಫರ್ ಘೋಷಿಸಿದೆ. ಜಿಯೋ ಮತ್ತು ಕ್ಯಾನ್ವಾ ನಡುವಿನ ಪಾಲುದಾರಿಕೆಯಡಿ ಅರ್ಹ ಗ್ರಾಹಕರಿಗೆ 12 ತಿಂಗಳ ಕಾಲ ಉಚಿತವಾಗಿ ಕ್ಯಾನ್ವಾ ಪ್ರೊ ಅಥವಾ ಕ್ಯಾನ್ವಾ ಪ್ರೊ ಲೈಟ್ ಸೌಲಭ್ಯ ದೊರೆಯಲಿದೆ.
ಸೆಪ್ಟೆಂಬರ್ 16ರಿಂದ ಮೈಜಿಯೋ ಆ್ಯಪ್ ಮೂಲಕ ಈ ಆಫರ್ ಸಕ್ರಿಯಗೊಳಿಸಬಹುದು. 399 ರೂ.ಗಳ ಯೋಜನೆಯ ಗ್ರಾಹಕರಿಗೆ ಕ್ಯಾನ್ವಾ ಪ್ರೊ ಹಾಗೂ 349 ರೂ.ಗಿಂತ ಹೆಚ್ಚಿನ ದರದ ಪ್ರತಿದಿನ 2 ಜಿಬಿ ಡೇಟಾ ಯೋಜನೆ ಹೊಂದಿರುವವರಿಗೆ ಕ್ಯಾನ್ವಾ ಪ್ರೊ ಲೈಟ್ ನೀಡಲಾಗುತ್ತದೆ.
ಈ ಕೊಡುಗೆಯಡಿ ಯಾವುದೇ ಹೆಚ್ಚುವರಿ ಅಥವಾ ಗುಪ್ತ ಶುಲ್ಕಗಳಿಲ್ಲ. ವಿದ್ಯಾರ್ಥಿಗಳು, ಕಂಟೆಂಟ್ ಕ್ರಿಯೇಟರ್ಗಳು, ವೃತ್ತಿಪರರು ಮತ್ತು ಸಣ್ಣ ಉದ್ಯಮಿಗಳು ಮೊಬೈಲ್ನಲ್ಲಿಯೇ ಪೋಸ್ಟರ್, ಪ್ರಸ್ತುತಿ, ಮಾರ್ಕೆಟಿಂಗ್ ಸಾಮಗ್ರಿ ಸೇರಿದಂತೆ ವಿವಿಧ ವಿನ್ಯಾಸಗಳನ್ನು ರಚಿಸಬಹುದು.
ಆಫರ್ ಪಡೆಯಲು ಮೈಜಿಯೋ ಆ್ಯಪ್ ತೆರೆಯಿರಿ, ಕ್ಯಾನ್ವಾ ಕೊಡುಗೆಯನ್ನು ಆಯ್ಕೆ ಮಾಡಿ ಸಕ್ರಿಯಗೊಳಿಸಿ.

