ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ಸಮಗ್ರ ಅಭಿವೃದ್ಧಿಗೆ ಹೊಸ ಬಾಷ್ಯ ಬರೆಯುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆದಿದೆ. ಸಭೆಯಲ್ಲಿ ಒಟ್ಟು 40 ಪ್ರಮುಖ ವಿಷಯಗಳಿಗೆ ಅಧಿಕೃತ ಅಂಕಿತ ಬಿದ್ದಿದ್ದು, ಒಟ್ಟು ₹32,611 ಕೋಟಿ ರೂಪಾಯಿಗಳ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಬದಲಾಯಿಸುವ ಪ್ರಸ್ತಾಪಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯ ಸಂಗ್ರಹಕ್ಕಾಗಿ ಒಂದು ತಿಂಗಳ ಕಾಲ ಕರಡು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಸಾರ್ವಜನಿಕ ಚರ್ಚೆಯ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ಅನುದಾನ ಹಂಚಿಕೆಯ ವಿವರ
- ಗ್ರಾಮೀಣಾಭಿವೃದ್ಧಿ: ₹16,000 ಕೋಟಿ
- ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿ: ₹16,000 ಕೋಟಿ
- ರಸ್ತೆ ಮೂಲಸೌಕರ್ಯ ಅಭಿವೃದ್ಧಿ: ₹14,000 ಕೋಟಿ
ಆರೋಗ್ಯ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ
- ಪ್ರತ್ಯೇಕ ವಿಶ್ವವಿದ್ಯಾಲಯ: ಮೀನುಗಾರಿಕೆ, ಸಾಗರ ಅಧ್ಯಯನ ಹಾಗೂ ಬ್ಲೂ ಎಕನಾಮಿಕ್ಸ್ಗಾಗಿ ಹೊಸ ಯುನಿವರ್ಸಿಟಿ ಸ್ಥಾಪನೆ. ಸೀಟುಗಳ ಸಂಖ್ಯೆಯನ್ನು 60 ರಿಂದ 200ಕ್ಕೆ ಹೆಚ್ಚಳ.
- ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು: ಮಂಗಳೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಹೊಸ ಘಟಕಗಳ ಸ್ಥಾಪನೆ.
- ಪ್ರವಾಸೋದ್ಯಮ ನೀತಿ: ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ವಿಶೇಷ ಪ್ರವಾಸೋದ್ಯಮ ನೀತಿ ಜಾರಿ.
- ವಿಕೇಂದ್ರೀಕರಣ: ಮುಂದಿನ 15 ತಿಂಗಳಲ್ಲಿ ರಾಜ್ಯದ 10 ರಿಂದ 12 ಜಿಲ್ಲೆಗಳಲ್ಲಿ ಇದೇ ಮಾದರಿಯಲ್ಲಿ ಸಂಪುಟ ಸಭೆಗಳನ್ನು ನಡೆಸಿ ಪ್ರಾದೇಶಿಕ ಅಭಿವೃದ್ಧಿಗೆ ವೇಗ.
ಪ್ರಮುಖ ಯೋಜನೆಗಳು ಮತ್ತು ಹಂಚಿಕೆಯಾದ ಅನುದಾನ
| ಯೋಜನೆ / ಕಾಮಗಾರಿ | ಮೀಸಲಿಟ್ಟ ಅನುದಾನ |
| ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರು ಅಭಿವೃದ್ಧಿ | ₹6,925 ಕೋಟಿ |
| ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆ | ₹425 ಕೋಟಿ |
| ಕಾರವಾರ ವಿಮಾನ ನಿಲ್ದಾಣ ರನ್ವೇ ನಿರ್ಮಾಣ (ನೌಕಾಪಡೆ) | ₹250 ಕೋಟಿ |
| ಉಡುಪಿಯ ಮಲ್ಪೆಯಲ್ಲಿ ಪಿಪಿಪಿ ಮಾದರಿ ಯೋಜನೆ | ₹179 ಕೋಟಿ |
| ಲೈಟ್ ಹೌಸ್ ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿ | ₹60.34 ಕೋಟಿ |
| ಮಂಗಳೂರು-ಅತ್ರಾಡಿ ಮಾರ್ಗದ ಮರವೂರು ಸೇತುವೆ కాಮಗಾರಿ | ₹40 ಕೋಟಿ |
| ಕಟೀಲು ರಸ್ತೆ ಅಭಿವೃದ್ಧಿ | ₹33 ಕೋಟಿ |
| ಮುಲ್ಕಿಯ ದಾಮಸ್ ಕಟ್ಟೆ ಬಳಿ ಪಾಲಿಮಾರ್ ಕಟ್ಟೆ ಸೇತುವೆ | ₹25 ಕೋಟಿ |
| ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ ಕಾಂಗ್ರೆಸ್ ಭವನ | ₹5 ಕೋಟಿ |
| ‘ಮಂಗಳೂರು ಐ’ ಯೋಜನೆ (ಕದ್ರಿಯ 5 ಎಕರೆ ಜಾಗದಲ್ಲಿ) | ಪ್ರತ್ಯೇಕ ಅನುಮೋದನೆ |
| ಮಂಗಳೂರು ಕೋಟೆಪುರ – ಚರ್ವತ್ತೂರು ಸಂಪರ್ಕ ಯೋಜನೆ | ಪ್ರತ್ಯೇಕ ಅನುದಾನ |

