ಕೊಚ್ಚಿ : ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸಂತಸದ ಸುದ್ದಿ ಕೊಚ್ಚಿನ್ ಶಿಫ್ ಯಾರ್ಡ್ ನಲ್ಲಿ ನಿರ್ಮಾಣಗೊಂಡ ಎರಡು ಯುದ್ದ ನೌಕೆಗಳಿಗೆ ಕೇಂದ್ರ ಸರಕಾರ ಮಲ್ಪೆ ಹಾಗೂ ಮುಲ್ಕಿ ಹೆಸರನ್ನು ಇಟ್ಟಿದ್ದು, ಕರಾವಳಿಯ ಈ ಎರಡು ಪ್ರದೇಶಗಳು ಹೆಸರು ಇನ್ನು ದೇಶದ ನೌಕಾಸೇನೆಯಲ್ಲಿ ರಾರಾಜಿಸಲಿದೆ.
ಕೇರಳದ ಕೊಚ್ಚಿನ್ ಶಿಫ್ ಯಾರ್ಡ್ ನಲ್ಲಿ ಭಾರತದ ನೌಕಾಪಡೆಗಾಗಿ ನಿರ್ಮಾಣಗೊಂಡ ಜಲಾಂತರ್ಗಾಮಿ ವಿರೋಧಿ ಯುದ್ದ ನೌಕೆ ಐಎನ್ಎಸ್ ಮಲ್ಪೆ ಮತ್ತು ಐಎನ್ಎಸ್ ಮುಲ್ಕಿ ನೌಕಾಪಡೆಗೆ ಹಸ್ತಾಂತರಗೊಂಡಿದೆ.
ಕೊಚ್ಚಿಯ ದಕ್ಷಿಣ ನೌಕಾಪಡೆಯ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ವಿ. ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿದ್ದರು. ಅವರ ಪತ್ನಿ ವಿಜಯ ಶ್ರೀನಿವಾಸ್ ಹಡಗುಗಳ ಉಡಾವಣೆ ಸಮಾರಂಭ ನೆರವೇರಿಸಿದರು. INS. ನೌಕಾಪಡೆಯು ಹಡಗುಗಳಿಗೆ ಮುಲ್ಕಿ, ಮಲ್ಪೆ ಎಂದು ಹೆಸರಿಸಿದೆ. ಈ ಸರಣಿಯ ಮೂರು ಹಡಗುಗಳನ್ನು ಕಳೆದ ವರ್ಷ ಪ್ರಾರಂಭಿಸಲಾಯಿತು.

