ಕಾರ್ಕಳ : ತಾಲೂಕಿನ ಈದುವಿನಲ್ಲಿ ಕಾಲರ ಜ್ವರ ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾ ಆರೋಗ್ಯ, ತಾಲೂಕು ಆರೋಗ್ಯ ಅಧಿಕಾರಿಗಳು ಈದುವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈದು ಗ್ರಾಮದ ಚಾಲಕನೊಬ್ಬ ಮಂಗಳೂರು ಸೇರಿದಂತೆ ವಿವಿಧೆಡೆ ಸಂಚರಿಸಿ ಆಹಾರ ಸೇವನೆ ಮಾಡುತ್ತಿದ್ದು, ಸ್ಥಳೀಯ ಕಾರ್ಯಕ್ರಮದಲ್ಲಿಯೇ ಆಹಾರ ಸೇವಿಸಿದ್ದ. ಜ್ವರ ಉಲ್ಬಣಗೊಂಡಾಗ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರು ಆತನಿಗೆ ಕಾಲರ ದೃಢಪಟ್ಟಿರುವ ಬಗ್ಗೆ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ ಗಡದ್ ಅವರು ಈದು ಗ್ರಾಮಕ್ಕೆ ಧಾವಿಸಿ ಮನೆಯ ಎಲ್ಲರ ಮಾಹಿತಿ ಪಡೆದು ಆರೋಗ್ಯ ಪರೀಕ್ಷೆ ನಡೆಸಿದ್ದಾರೆ. ಆದರೆ ಒಂದು ಪ್ರಕರಣ ಮಾತ್ರ ಕಾಲರ ಜ್ವರ ಇರುವುದು ಸಾಬೀತಾಗಿದೆ.
ಕಾಲರ ರೋಗವು ವೈಬ್ರಿಯೋ ಕಾಲರೇ ಎನ್ನುವ ಬ್ಯಾಕ್ಟಿರಿಯಾಗಳಿಂದ ಹರಡುವ ರೋಗವಾಗಿದೆ. ಸಾಂಕ್ರಾಮಿಕವಾಗಿ ಮಾನವನ ದೇಹದ ಸಣ್ಣ ಕರುಳಿಗೆ ಆಗುವ ಸೋಂಕು. ಕಾಲರ ರೋಗವು ಮೊದಲು ರಷ್ಯಾ ದೇಶಕ್ಕೆ ಸುಮಾರು 1817ರಲ್ಲಿ ಹರಡಿ, ಯೂರೋಪಿನ ಅಮೆರಿಕಾ ಬಳಿಕ ವಿಶ್ವಾದ್ಯಂತ ಹರಡಿ ಲಕ್ಷಾಂತರ ಜನರ ಮೃತಪಟ್ಟಿದ್ದರು. ಕೊಳೆತ ತಿಂಡಿ ಪದಾರ್ಥಗಳು, ಕೊಳೆತ ನೀರು, ನೈರ್ಮಲ್ಯವಿಲ್ಲದ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುವ ರೋಗವಾಗಿದೆ.

