ಉಡುಪಿ : ವಂಡಾರುವಿನಲ್ಲಿ ರಾತ್ರಿ ವೇಳೆ ಯಾರೋ ಬಂದು ಕಾಡು ಕೋಣ ಹೊಡೆದರೆಂಬ ಸುದ್ದಿ ವೈರಲ್ ಆಗುತ್ತಿದೆ.
ರಾತ್ರಿ ವೇಳೆ ಯಾರೋ ಆಗಮಿಸಿ ಕಾಡು ಕೋಣ ಹೊಡೆದು ಅದನ್ನು ವಾಹನದಲ್ಲಿ ಸಾಗಿಸಿದರೆನ್ನಲಾಗುತ್ತಿದ್ದು, ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಸ್ಥಳದಲ್ಲಿ ಸೆಗಣಿ, ಕರಳು ಬಿದ್ದಿದ್ದು, ಈ ವಿಚಾರ ಅರಣ್ಯ ಇಲಾಖೆವರೆಗೂ ತಲುಪಿದ್ದು, ಅವರು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ವೈದ್ಯರು ದೃಢಿಕರೀಸಿದ ಬಳಿಕವೇ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು ವರದಿಯಾಗಿದೆ.

