ಬ್ರಹ್ಮಾವರ : ಉಪ್ಪೂರು ಸರಕಾರಿ ಪ್ರೌಢ ಶಾಲೆ ಬಳಿ ನಾಲ್ವರು ಹುಡುಗರು ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ, ಅಸಭ್ಯವಾಗಿ ಕೈಸನ್ನೆ ಮಾಡಿ ಚುಡಾಯಿಸಿದ ಘಟನೆ ನಡೆದಿದೆ.
9ನೇ ತರಗತಿ ಬಾಲಕಿ ಶಾಲೆ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಸ್ಕೂಟಿಯಲ್ಲಿ ಬಂದ ನಾಲ್ವರು ಹುಡುಗರು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

