ಬ್ರಹ್ಮಾವರ : ಕಾಡೂರು ಗ್ರಾಮದ ಮುಂಡಾಡಿ ಕ್ಯಾಶ್ಯೂ ಫಾಕ್ಟರಿಯಲ್ಲಿ 15 ಲಕ್ಷ ರೂ. ಬೆಲೆಬಾಳುವ ಸೊತ್ತುಗಳು ಕಳವಾಗಿರುವುದಾಗಿ ಪಾಲುದಾರ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.
ಫ್ಯಾಕ್ಟರಿ ಸಮೀಪ ಹೋದಾಗ ಶಂಕರ ಮತ್ತು ಉಮೇಶ್ ಹಿಂಬದಿ ಬಾಗಿಲು ಮುರಿದು ಮೆಷಿನರಿ ಮತ್ತು ಸಲಕರಣೆಗಳನ್ನು ತೆಗೆಯುತ್ತಿದ್ದು, ತನ್ನನ್ನು ನೋಡಿ ಪರಾರಿಯಾಗಿದ್ದಾರೆ. ಅನಂತರ ಫ್ಯಾಕ್ಟರಿ ಒಳಗೆ ಹೋಗಿ ಪರಿಶೀಲಿಸುವಾಗ ಸೊತ್ತು ಕಳವಾಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

