ಶಿರ್ವ : ನಾಲ್ಕುಬೀದಿ-ಎಡ್ಮೇರು-ಪಳ್ಳಿ ರಸ್ತೆಯ ಎಡ್ಮೇರು ಗಣಶ್ರೀ ಗಾರ್ಡ್ನ್ ಲೇಔಟ್ ಬಳಿ ಗುರುವಾರ ಬಾಲಕನಿಗೆ ಟೆಂಪೋ ಡಿಕ್ಕಿ ಹೊಡೆದಿದ್ದು, ಆತ ಗಂಭೀರ ಗಾಯಗೊಂಡಿದ್ದಾನೆ.
ನಿಂಜೂರು ಗ್ರಾಮದ ಬಾಲಕ ಭರತ (14) ಗಾಯಾಳು.
ಆತ ಎಡ್ಮೇರು ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದಾಗ ಟೆಂಪೋ ಡಿಕ್ಕಿ ಹೊಡೆದಿದೆ.
ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

