ಉಡುಪಿ : ಕಾರು ಡಿಕ್ಕಿ ಹೊಡೆದು ಯುವತಿ ಗಾಯಗೊಂಡ ಘಟನೆ ನಡೆದಿದೆ.
ಕಿನ್ನಿಮೂಲ್ಕಿ ಸ್ವಾಗತಗೋಪುರದ ಬಳಿ ಹಾದು ಹೋಗಿರುವ ರಾ.ಹೆ.ಯ ಸರ್ವಿಸ್ ರಸ್ತೆಯಲ್ಲಿ ಮೊಹಮ್ಮದ್ ಇಬ್ರಾಹಿಂ ಚಲಾಯಿಸುತ್ತಿದ್ದ ಕಾರು ಕಡೆಕಾರಿನ ಅನುಶ್ರೀ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಗಾಯಗೊಂಡ ಅನುಶ್ರೀ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

