ಕುಪ್ಪೆಪದವು : ದ್ವಿಚಕ್ರ ವಾಹನದ ಸೀಟ್ ಕೆಳಗಡೆ ನುಸುಳಿ ಕೂತಿದ್ದ ಕನ್ನಡಿ(ಕಂದಡಿ)ಹಾವು ವಾಹನ ಸವಾರನಿಗೆ ಕಚ್ಚಿದ ಘಟನೆ ಕುಪ್ಪೆಪದವಿನಲ್ಲಿ ನಡೆದಿದ್ದು, ಸವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೈಬರ್ ಸೆಂಟರ್ ನಡೆಸುತ್ತಿರುವ ಇಮ್ತಿಯಾಜ್ ಎಂಬವರು ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮಸೀದಿಗೆ ಹೋಗಿ ಅಲ್ಲಿಂದ ಮನೆಗೆ ತೆರಳಲು ತನ್ನ ಇಲೆಕ್ಟ್ರಿಕ್ ಸ್ಕೂಟರ್ ಬಳಿ ಬಂದು ಸ್ಕೂಟರ್ ನ ಸೀಟ್ ತೆರೆದು ಕಾಗದ ಪತ್ರಗಳನ್ನು ಇಡುವ ವೇಳೆ ಸೀಟಿನ ಕೆಳಗಡೆ ಇದ್ದ ಹಾವು ಬೆರಳಿಗೆ ಕಚ್ಚಿದೆ.
ತಕ್ಷಣ ಇಮ್ತಿಯಾಜ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಳಿಸಲಾಗಿದ್ದು, ಕಚ್ಚಿದ ಹಾವನ್ನು ಸ್ಥಳದಲ್ಲಿದ್ದವರು ಸೆರೆ ಹಿಡಿದು ಆಸ್ಪತ್ರೆಗೆ ಕೊಂಡು ಹೋಗಿದ್ದು, ಇಮ್ತಿಯಾಜ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ

