ಉಡುಪಿ : ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ನೇತ್ರತ್ವದಲ್ಲಿ ಉಡುಪಿ ನಗರದ ಮೀನು ಮಾರುಕಟ್ಟೆ, ರಿಕ್ಷಾನಿಲ್ದಾಣ ಹಾಗೂ ಅಂಗಡಿ ಮುಗ್ಗಟ್ಟುಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕರು ಮಿಸ್ಡ್ ಕಾಲ್ ನೀಡಿ ಬಿಜೆಪಿ ಸದಸ್ಯತ್ವ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವಮೋರ್ಚಾ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಅಕ್ಟೋಬರ್ 15ರ ತನಕ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಪೇಟೆಗಳು, ಫಾಕ್ಟರಿಗಳು, ಜಿಮ್, ಸಂತೆಗಳು, ಮೀನು ಮಾರುಕಟ್ಟೆ, ರಿಕ್ಷಾ ನಿಲ್ದಾಣ, ಬಸ್ ಸ್ಟಾಂಡ್ ಬಂದರು ಹಾಗೂ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಯುವಮೋರ್ಚಾ ಅಭಿಯಾನ ನಡೆಸಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಭಾರಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಕಾಪು, ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಅಭಿರಾಜ್ ಸುವರ್ಣ, ಶಶಾಂಕ್ ಶಿವತ್ತಾಯ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಗಜೇಂದ್ರ ಎಸ್ ಬೇಲೆಮನೆ, ಉಡುಪಿ ನಗರದ, ಜಿಲ್ಲೆಯ ಹಾಗೂ ವಿವಿಧ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.


