ಬ್ರಹ್ಮಾವರ : ಕುದಿ ಗ್ರಾಮದ ಬಿಯಾಳಿಯ ಸುಬ್ರಾಯ ನಾಯ್ಕ (66) ಸೆ. 27ರಂದು ಸೀತಾ ನದಿ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಸ್ವಾಭಾವಿಕ ಸಾವು ಆಗಿದ್ದರೂ ಪೊಲೀಸ್ ಠಾಣೆ ಅಥವಾ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದೆ ಹಿರಿಯ ಪುತ್ರ ಸೀತಾರಾಮ ನಾಯ್ಕ ದಹನ ಕ್ರಿಯೆ ನೆರವೇರಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಬ್ರಾಯ ನಾಯ್ಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

