ಬ್ರಹ್ಮಾವರ : ಹಾವಂಜೆ ಗ್ರಾಮ ಬೆಳ್ಮಾರು ರಸ್ತೆಯ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಯುತ್ತಿದ್ದ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿದ್ದಾರೆ.
ಗುರುಪ್ರಸಾದ್, ವಿಜಯ, ಗಣೇಶ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಸಂತೋಷ್ ಆಟ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಕೆಲವರು ಪರಾರಿಯಾಗಿದ್ದಾರೆ.
2 ಕೋಳಿ, 2 ಕೋಳಿ ಬಾಳು ಹಾಗೂ 5 ಸ್ಕೂಟರ್ಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

