ಉಳ್ಳಾಲ : ತೆರೆದ ಬಾವಿಯೊಂದಕ್ಕೆ ಬಿದ್ದಿರುವ ಎತ್ತನ್ನು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ರಕ್ಷಿಸಿರುವ ಘಟನೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರುಪಲ್ಲ ಎಂಬಲ್ಲಿ ನಡೆದಿದೆ.
ಆವರಣ ಗೋಡೆಯಿಲ್ಲದೆ ಪಾಳು ಬಿದ್ದಿರುವ ಸರಕಾರಿ ಬಾವಿಯೊಂದಕ್ಕೆ ಹೋರಿಯೊಂದು ಬಿದ್ದು ನೀರಲ್ಲಿ ಒದ್ದಾಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೋರಿಯನ್ನ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಪಿಲಾರು ಪಲ್ಲದಲ್ಲಿರುವ ಸರಕಾರದ ತೆರೆದ ಬಾವಿಗೆ ಹೋರಿ ಬಿದ್ದು ಒದ್ದಾಡುತ್ತಿದ್ದುದನ್ನು ಕಂಡ ಸ್ಥಳೀಯ ಸಮಾಜ ಸೇವಕ ಉದಯ ಗಟ್ಟಿ ಪಿಲಾರು ಅವರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಘಟನ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬಂದಿ ಸತತ ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿ ಹೋರಿಯನ್ನ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

