ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಲು ಸಾಲು ಸರ್ಕಾರಿ ರಜೆ ಇರುವ ಕಾರಣದಿಂದಾಗಿ ಬಸ್ಗಳಿಗೆ ಟಿಕೆಟ್ ದರ ಏರಿಕೆ ಮಾಡದಂತೆ ಆರ್ಟಿಒ ಸೂಚನೆ ನೀಡಿದ್ದರು, ಇದರ ಬಗೆಗೆ ಗಮನಹರಿಸದ ಖಾಸಗಿ ಬಸ್ಗಳು ಟಿಕೆಟ್ ದರ ಏರಿಸಿ ಸುಲಿಗೆ ಆರಂಭಿಸಿವೆ.
ಬೆಂಗಳೂರು ಮತ್ತು ಮಂಗಳೂರು ಮಧ್ಯೆ ಒಡಾಡುವ ಖಾಸಗಿ ಬಸ್ಗಳು 1,000 ರೂ.ನಿಂದ 1,500 ರೂ.ವರಗೆ ಟಿಕೆಟ್ ದರ ಸುಲಿಗೆ ಮಾಡುತ್ತಿವೆ. ಇನ್ನೂ ಕೆಲವು ಬಸ್ಗಳಲ್ಲಂತೂ ಟಿಕೆಟ್ ದರ 2,000 ರೂ. ಗಳಷ್ಟು ದಾಟಿದೆ.
ನೈಋತ್ಯ ರೈಲ್ವೆಯು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರೈಲು ಸೇವೆ ಒದಗಿಸುತ್ತಿದರು ಎಲ್ಲ ಸೀಟುಗಳು ಈಗಾಗಲೇ ಕಾಯ್ದಿರಿಸಿರುವುದರಿಂದಾಗಿ ಮತ್ತು ಕೆಎಸ್ಆರ್ಟಿಸಿ ಬಸ್ಗಳಲ್ಲಿಯೂ ಬಹುತೇಕ ಸೀಟ್ಗಳು ಮುಂಗಡವಾಗಿ ಕಾಯ್ದಿರಿಸಲ್ಪಟಿರುವುದರಿಂದ ಖಾಸಗಿ ಬಸ್ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಇದರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವೊಂದು ಖಾಸಗಿ ಬಸ್ಸುಗಳು ಆರ್ ಟಿ ಒ ನ ನಿಯಮವನ್ನು ಮೀರಿ ಟಿಕೆಟ್ ದರ ಏರಿಕೆ ಮಾಡಿವೆ ಮತ್ತು ಲಗೇಜ್ಗೂ ಹೆಚ್ಚುವರಿಯಾಗಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಪ್ರಯಾಣಿಕರು ಅವಲತ್ತುಕೊಳ್ಳುತ್ತಿದ್ದಾರೆ.
ಮಂಗಳೂರು ಮತ್ತು ಬೆಂಗಳೂರು ನಡುವೆ ಚಲಿಸುವ ಕೆಎಸ್ಆರ್ಟಿಸಿ ಬಸ್ ದರಗಳು ಸ್ಥಿರವಾಗಿವೆ. ಆದರೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ವಿಶೇಷ ಬಸ್ ದರ ಮಾತ್ರ ಶೇ 20 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

