ಶಿರ್ವ: ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ಕಾಲು ಗ್ರಾಮದ ಬಿಳಿಯಾರು ಹಾಡಿ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ನಿರತರಾಗಿದ್ದ 9 ಮಂದಿಯನ್ನು ಶಿರ್ವ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಟಿ. ನಾಯ್ಕ್ (ತನಿಖೆ) ನೇತೃತ್ವದ ತಂಡ ವಶಕ್ಕೆ ಪಡೆದಿದ್ದಾರೆ.
ಶಂಕರಪುರ ಮೂಡಬೆಟ್ಟು ಶಿವಾನಂದ ನಗರದ ಉದಯ (53), ಸರಕಾರಿ ಗುಡ್ಡೆಯ ಭುಜಂಗ (52), ಬಿಳಿಯಾರುವಿನ ಶೇಖರ (65), ಶಿವಾನಂದ ನಗರದ ಕಿಟ್ಟ (55), ಬಿಳಿಯಾರುವಿನ ಸಂಜೀವ ದೇವಾಡಿಗ (72), ಬಿಳಿಯಾರುವಿನ ರಮೇಶ (35), ಮೂಡಬೆಟ್ಟು ಶಿವಾನಂದ ನಗರದ ಸಂಜಯ್ (42), ಕಾರ್ಕಳ ಕಲ್ಯಾದ ನಾರಾಯಣ ಪೂಜಾರಿ (68) ಮತ್ತು ಮೂಡಬೆಟ್ಟುವಿನ ಮಹಮ್ಮದ್ (63) ರನ್ನು ವಶಕ್ಕೆ ಪಡೆದಿದ್ದು, ಜುಗಾರಿ ಆಟಕ್ಕೆ ಬಳಸಿದ್ದ 10,760 ರೂ. ನಗದು ಮತ್ತು 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

