ʼಎದ್ದೇಳು ಮಂಜುನಾಥʼ ಸಿನಿಮಾ ಖ್ಯಾತಿಯ ಡೈರೆಕ್ಟರ್ ಗುರುಪ್ರಸಾದ್ ಅವರ ಮೃತದೇಹ ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ಸಾವಿಗೆ ಸಂಬಂಧಿಸಿದಂತೆ ಕೆಲವೊಂದು ಅನುಮಾನಗಳು ಮೂಡಿವೆ. ಅವರ ಸಾವಿನ ಹಿಂದಿರುವ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ.
ಗುರುಪ್ರಸಾದ್ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡವರು. ಈಗ ಅವರು ಅನುಮಾನಾಸ್ಪದ ರೀತಿಯಲ್ಲಿ ನಿಧನರಾಗಿರುವುದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೆನಿಸಿದರು, ಸೂಕ್ತ ತನಿಖೆ ಬಳಿಕ ಸತ್ಯ ತಿಳಿಯಬೇಕಾಗಿದೆ. ಅವರ ಸಾವಿನ ಬಗ್ಗೆ ಅನುಮಾನಗಳು ಹೆಚ್ಚಾಗಿದೆ.
ಸಾಲದ ಹೊರೆ : ನಿರ್ದೇಶಕ ಗುರುಪ್ರಸಾದ್ ಅವರು ಹೆಚ್ಚಿನ ಸಾಲ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಸಾಲ ಕೊಟ್ಟವರಿಂದ ಅವರಿಗೆ ತೊಂದರೆ ಆಗುತ್ತಿತ್ತು. ಅಂದಾಜು ಮೂರು ಕೋಟಿ ಸಾಲದ ಸುಳಿಯಲ್ಲಿ ಗುರುಪ್ರಸಾದ್ ಸಿಲುಕಿದ್ದರು ಎನ್ನಲಾಗಿದೆ.
ಸಿನಿಮಾ ರಿಲೀಸ್ಗೂ ತೊಂದರೆ : ಇತ್ತೀಚಿಗೆನ ಸಿನಿಮಾಗಳಲ್ಲಿ ಗುರು ಪ್ರಸಾದ್ ಅವರಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿರಲಿಲ್ಲ. ಹಾಗಾಗಿ ಅವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ‘ಎದ್ದೇಳು ಮಂಜುನಾಥ 2’ ಸಿನಿಮಾದ ಶೂಟಿಂಗ್ ಮುಗಿದು 2 ವರ್ಷ ಕಳೆದ್ದಿದರು ಸಿನಿಮಾ ಬಿಡುಗಡೆಯಾಗಿಲ್ಲ.
ಬಂಧನದ ಭೀತಿ : ಸಾಲದ ಹಣವನ್ನು ವಾಪಸ್ ನೀಡಲಾಗದೇ ಗುರುಪ್ರಸಾದ್ ತೊಂದರೆ ಅನುಭವಿಸುತಿದ್ದರು. ಹಲವು ಕೋರ್ಟ್ ಕೇಸ್ ಅವರ ಮೇಲೆ ಇತ್ತು. ಚೆಕ್ ಬೌನ್ಸ್ ಕೇಸ್ನಿಂದಾಗಿ ಅವರು ಬಂಧನದ ಭೀತಿಯಲ್ಲಿ ಇದ್ದರು. ಸಾಲ ಮರುಪಾವತಿ ಮಾಡಲಾಗದ, ಭೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವಿದೆ.
ಕೌಟುಂಬಿಕ ಅಸಮಾಧಾನ : ಗುರುಪ್ರಸಾದ್ ಅವರ ನಿಧನದ ಹಿಂದೆ ಕೌಟುಂಬಿಕ ಕಲಹ ಕೂಡ ಇದ್ದಿರಬಹುದು ಎಂಬ ಅನುಮಾನ ಮೂಡಿದೆ. ಮೊದಲ ಪತ್ನಿಯಿಂದ ದೂರವಾಗಿದ್ದು, 2ನೇ ಮದುವೆಯಾಗಿದ್ದರು. 2ನೇ ಮದುವೆಯಾಗಿದ್ದರೂ ಒಂಟಿಯಾಗಿ ವಾಸ ಮಾಡುತ್ತಿದ್ದರು.
ಇದರಿಂದಾಗಿ ಗುರುಪ್ರಸಾದ್ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

