ಉಡುಪಿ : ಎಂಟು ವರ್ಷಗಳಿಂದ ಉಡುಪಿಯ ಅಂಬಲಪಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ನೂತನ ಕಟ್ಟಡವು ಕಿನ್ನಿಮುಲ್ಕಿಯ ವೇಗಸ್ ಟೌನ್ಶಿಪ್ ನಲ್ಲಿ ನಿರ್ಮಾಣಗೊಂಡಿದೆ, ಇದರ ಉದ್ಘಾಟನಾ ಸಮಾರಂಭವು ನ.8ರಂದು ಸಂಜೆ 4 ಗಂಟೆಗೆ ನಡೆಯಲಿರುತ್ತದೆ.
ಕಾರ್ಯಕ್ರಮವನ್ನು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ನೂತನ ಕಾಲೇಜು ಕಟ್ಟಡವನ್ನು ಗುಜರಾತ್ ನ ಸರ್ವೋದಯ ಸೇವಾ ಟ್ರಸ್ಟ್ನ ಅಧ್ಯಕ್ಷರಾಗಿರುವ ಸೋಮಭಾಯಿ ಮೋದಿ ಇವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಯಶ್ಪಾಲ್ ಸುವರ್ಣ ಅವರು ನಿರ್ವಹಿಸಲಿದ್ದಾರೆ. ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು, ಉದ್ಯಮಿ ಡಾ.ಜಿ.ಶಂಕರ್ ರವರು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ರವರು ಭಾಗವಹಿಸಲಿದ್ದಾರೆ.
ಈ ಕಾಲೇಜು ಸುಸಜ್ಜಿತವಾದ ಪ್ರಯೋಗಾಲಯ, ವಿಶಾಲವಾದ ಡಿಜಿಟಲ್ ತರಗತಿಗಳು, ಗ್ರಂಥಾಲಯ, ಇವೆಲ್ಲವೂ ಇರಲಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳನ್ನು ಕಲ್ಪಿಸಲಾಗಿರುತ್ತದೆ.
ಈ ಸಲದ ಶೈಕ್ಷಣಿಕ ವರ್ಷದಿಂದ ಬಿ.ಪಿ.ಟಿ. ಕೋರ್ಸ್ನ್ನು ಪ್ರಾರಂಭಿಸಿದ್ದೇವೆ, ವಿದ್ಯಾರ್ಥಿಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕರಾದ ಡಾ.ಕೃಷ್ಣ ಪ್ರಸಾದ್ ಕೂಡ್ಲು ತಿಳಿಸಿದ್ದಾರೆ.

