ಸುಳ್ಯ : ರಸ್ತೆ ಬದಿಯ ಚರಂಡಿ ಅವ್ಯವಸ್ಥೆಯಿಂದಾಗಿ ಸುಳ್ಯದ ಬಹುತೇಕ ರಸ್ತೆಗಳಲ್ಲಿ ಮಳೆಯ ಚರಂಡಿ ನೀರು ರಸ್ತೆಯಲ್ಲಿ ಹರಿದು ಗುಂಡಿಗಳು ನಿರ್ಮಾಣಗೊಂಡಿರುವುದು ಜನಸಾಮಾನ್ಯರ ಮತ್ತು ವಾಹನ ಸಂಚಾರರ ಅಸಮಾಧಾನಕ್ಕೆ ಕಾರಣವಾಗಿದೆ
ನಿಂತಿಕಲ್ಲು, ಬೆಳ್ಳಾರೆ, ಸೋಣಂಗೇರಿ, ಜಾಲ್ಸೂರು, ಕಾಸರಗೋಡು, ಜಯನಗರ, ದುಗ್ಗಲಡ್ಕ, ಸುಳ್ಯ ನಗರ ಸೇರಿದಂತೆ ಸುಳ್ಯದ ತಾಲೂಕಿನ ಬಹುತೇಕ ರಸ್ತೆಗಳು ಹಾನಿಗೊಳಗಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿಯು ಇದೆ ತೆರನಾಗಿರುವುದು ವಿಶೇದನೀಯ.
ಮಳೆಗಾಲ ಆರಂಭವಾಗುವ ಮೊದಲೆ ರಸ್ತೆ ಬದಿಯ ಚರಂಡಿಗಳು ದುರಸ್ತಿಗೊಂಡಿರಬೇಕಿತ್ತು, ಆದರೆ ಈ ದುರಸ್ತಿ ಕಾರ್ಯ ನಡೆಯದಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ರಸ್ತೆಯ ಡಾಮರು ಕಿತ್ತು ಹೊಂಡ-ಗುಂಡಿಗಳಾಗಿ ಪರಿವರ್ತನೆಯಾಗಿದೆ.

