ಉಡುಪಿ : ಕ.ವಿ.ಪ್ರ.ನಿ.ನಿಗಮದ ವತಿಯಿಂದ ರಾಜ್ಯದ ಎಲ್ಲಾ ಮೆಸ್ಕಾಂ ಕಛೇರಿಗಳಿಗೆ ಕಿರಿಯ ಪವರ್ಮೆನ್ ನೇಮಕಾತಿ ಸಂಬಂಧ ಸರಕಾರ ನೇಮಕಾತಿಯ ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದ, ಸ್ಥಳೀಯರಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸುವ ಸಲುವಾಗಿ ಮೆಸ್ಕಾಂ ಉಡುಪಿ ವಿಭಾಗ ವತಿಯಿಂದ ಎಸ್.ಎಸ್. ಎಲ್.ಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ಕಂಬವನ್ನು ಹತ್ತಿ ಇಳಿಯುವ ಉಚಿತ ತರಬೇತಿಯನ್ನು ನೀಡಲಾಗುತ್ತದೆ.
ನವಂಬರ್14 – 16 ರವರೆಗೆ ಕುಂಜಿಬೆಟ್ಟು ಎಂ.ಜಿ.ಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಭಾವಚಿತ್ರವಿರುವ ಗುರುತಿನ ಚೀಟಿಯನ್ನು, ಮತ್ತು ಎಸ್.ಎಸ್. ಎಲ್.ಸಿ ಅಂಕಪಟ್ಟಿ ಪ್ರತಿಯನ್ನು ತರಬೇಕು. ನೇಮಕಾತಿಯು ಅಭ್ಯರ್ಥಿಯ ಎಸೆಸೆಲ್ಸಿ ಅಂಕ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ತರಬೇತಿಯ ಸಮಯದಲ್ಲಿ ಯಾವುದೇ ರೀತಿಯ ಉಚಿತ ಸೌಲಭ್ಯಗಳು ಒದಗಿಸುವುದಿಲ್ಲ. ಮತ್ತು ತರಬೇತಿಯು ನೇಮಕಾತಿಯ ಭಾಗವಾಗಿರುವುದಿಲ್ಲ ಎಂದು ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

