ಬ್ರಹ್ಮಾವರ : ಕುಡಿದು ಮಹಿಳೆಯನ್ನು ಚುಡಾಯಿಸಿದ ಆರೋಪದ ಮೇಲೆ ಕಸ್ಟಡಿ ಸೇರಿದ್ದ ಆರೋಪಿ ನ.10 ರ ಮುಂಜಾನೆ ಸಾ*ವನ್ನಪ್ಪಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಕೇರಳ ಮೂಲದ ಬಿಜು ಮೋಹನ್ ಎಂದು ಗುರುತಿಸಲಾಗಿದೆ.
ಶನಿವಾರದಂದು ರಾತ್ರಿ ಕಂಠಪೂರ್ತಿ ಕುಡಿದು ತನ್ನ ರೂಮಿನ ಪಕ್ಕದ ಮಹಿಳೆಯನ್ನು ಚುಡಾಯಿಸಿದ ಆರೋಪದ ಮೇಲೆ ಪೊಲೀಸರ ಕಸ್ಟಡಿ ಸೇರಿದ್ದ ಆರೋಪಿಯು ನಸುಕಿನ ಜಾವ 3.30ಕ್ಕೆ ಕುಸಿದು ಬಿದ್ದು ಸಾವನಪ್ಪಿದ್ದಾನೆ. ತಕ್ಷಣವೆ ಆಸ್ಪತ್ರೆಗೆ ಸೇರಿಸಿದಾಗ ಆತ ಮೃ*ತಪಟ್ಟಿರುವುದು ತಿಳಿದು ಬಂದಿದೆ.
ಇದು ಹೃದಯಾ*ಘಾತ ಎಂದು ಪೊಲೀಸ್ ಇಲಾಖೆ ಹೇಳಿದರೂ ಠಾಣೆಯಲ್ಲೇ ಮೃ*ತಪಟ್ಟ ಹಿನ್ನಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದೊಂದು ಲಾಕಪ್ ಡೆತ್ ಆಗಿರುವ ಸಾಧ್ಯತೆಯು ಆಗಿರುವ ಅನುಮಾನವಿರುವುದರಿಂದ, ಹೆಚ್ಚಿನ ತನಿಖೆಗೆ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ನೀಡಿದ್ದಾರೆ.
ಈ ಘಟನೆಯ ಹಿನ್ನಲೆಯಲ್ಲಿ ಉಡುಪಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬ್ರಹ್ಮಾವರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಅವರೂ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.

