ನವದೆಹಲಿ: ಮಹಾರಾಷ್ಟ್ರದ ಅಚಲಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದು ಈ ವೇಳೆ ನಾನೊಬ್ಬ ಯೋಗಿ, ಯೋಗಿಗೆ ದೇಶವೇ ಮೊದಲು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿಮಗೆ ತುಷ್ಟೀಕರಣ ನೀತಿ ಮೊದಲು. ನಾನು ಖರ್ಗೆ ಅವರಿಗೆ ಹೇಳುತ್ತಿದ್ದೇನೆ. ಒಬ್ಬ ಯೋಗಿಗೆ ದೇಶವು ಮೊದಲು ಬರುತ್ತದೆ. ನನ್ನ ನಾಯಕ ಮೋದಿಯವರಿಗೂ ದೇಶವೇ ಮೊದಲು. ಆದರೆ ನಿಮಗೆ ಕಾಂಗ್ರೆಸ್ ತುಷ್ಟೀಕರಣವೇ ಮೊದಲು ಎಂದು ಹೇಳಿದರು.
ಖರ್ಗೆಯವರ ಗ್ರಾಮವು ಹೈದರಾಬಾದ್ ನಿಜಾಮರ ಅಧೀನದ ಗ್ರಾಮವಾಗಿತ್ತು. ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗ ಕಾಂಗ್ರೆಸ್ ನ ಅಂದಿನ ನಾಯಕತ್ವ ಮುಸ್ಲಿಂ ಲೀಗ್ನ ಸಹಯೋಗದಲ್ಲಿ ಮೌನ ವಹಿಸಿತ್ತು. ಆದ್ದರಿಂದಲೇ ಆ ಸಮಯದಲ್ಲಿ ಮುಸ್ಲಿಂ ಲೀಗ್ ಹಿಂದೂಗಳನ್ನು ಆಯ್ದು ಕೊಲ್ಲುತ್ತಿತ್ತು. ಇದೇ ಬೆಂಕಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಾಮವೂ ಸುಟ್ಟು ಕರಕಲಾಗಿದ್ದು, ಅವರ ತಾಯಿ ಹಾಗೂ ಕುಟುಂಬದವರು ಸಾವನ್ನಪ್ಪಿದ್ದರು. ಆದರೆ ಖರ್ಗೆಯವರು ಇದನ್ನು ಹೇಳುವುದಿಲ್ಲ ಏಕೆಂದರೆ ಅವರು ಆ ಮಾತುಗಳನ್ನು ಆಡಿದರೆ ಮುಸ್ಲಿಂ ಮತಗಳು ನುಣುಚಿಕೊಳ್ಳುತ್ತವೆ ಎಂದು ತಿಳಿದಿದೆ. ಮತ ಬ್ಯಾಂಕ್ಗಾಗಿ ಕುಟುಂಬದವರ ತ್ಯಾಗವನ್ನು ಖರ್ಗೆ ಮರೆತಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಜಾರ್ಖಂಡ್ನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಸಂತರ ಬಗ್ಗೆ ಮಾತನಾಡಿದ್ದು, ಈಗ ಅನೇಕ ಸಾಧುಗಳು ರಾಜಕಾರಣಿಗಳಾಗಿದ್ದಾರೆ. ಅವರು ಕೇಸರಿ ಬಟ್ಟೆಗಳನ್ನು ಧರಿಸಿ ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಮತ್ತು ಜನರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಯೋಗಿ ಖಡಕ್ ಆಗಿ ಉತ್ತರಿಸಿದ್ದು ಒಡೆದರೆ ಒಡೆದಂತಾಗುತ್ತದೆ ಎಂಬ ಹೇಳಿಕೆ ಸಂತರ ಹೇಳಿಕೆಯೇ? ಅಂತಹ ಹೇಳಿಕೆಯನ್ನು ಯಾವುದೇ ಸಂತರು ನೀಡಲು ಸಾಧ್ಯವಿಲ್ಲ. ಭಯೋತ್ಪಾದಕರು ಇದನ್ನು ಹೇಳಬಹುದು. ನಾವಲ್ಲ. ನಾಥ ಪಂಥದ ಯಾವ ಸಂತನೂ ಇಂಥ ಮಾತನ್ನು ಹೇಳಲಾರ. ನಾವು ಭಯಗೊಂಡರೆ ನಾವು ಸಾಯುತ್ತೇವೆ, ನಾವು ಹೆದರುವುದಿಲ್ಲ ಎಂದು ಯೋಗಿ ಹೇಳಿದ್ದಾರೆ.

