ಬೆಂಗಳೂರು : ರಾಜ್ಯದಲ್ಲಿ ಉಪ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಪುನ ರಚನೆಯಾಗಬಹುದೆಂಬ ಆಶಯ ಮೂಡಿದೆ. ಡಿಸೆಂಬರ್ ತಿಂಗಳಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗಲಿದ್ದು ಕೆಲವು ಸಚಿವರನ್ನು ಕೈಬಿಡಬಹುದು ಎಂದು ಮೂಲಗಳು ತಿಳಿಸಿವೆ.
ಭ್ರಷ್ಟಾಚಾರದ ಆರೋಪ ಹೊತ್ತಿರುವ ಮತ್ತು ವಿವಾದಗಳನ್ನು ಸೃಷ್ಟಿಸುವ ಏಳು ಮಂದಿ ಸಚಿವರನ್ನು ಸಂಪುಟದಿಂದ ಕೈ ಬಿಡಲು ನಿರ್ಧರಿಸಿದೆ, ಇದರಿಂದ ಸರ್ಕಾರದಲ್ಲಿ ಅಸಮಾಧಾನದ ಹೊಗೆಯಾಡಬಹುದು ಎಂದು ಅಂದಾಜಿಸಲಾಗಿದೆ.
ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪುರ, ಎಸ್ಎ.ಸ್ ಮಲ್ಲಿಕಾರ್ಜುನ್, ಬೋಸರಾಜು, ಕೆ.ಎನ್. ರಾಜಣ್ಣ ಸೇರಿದಂತೆ ಇಲಾಖೆಯಲ್ಲಿ ಹೆಚ್ಚು ಸಕ್ರಿಯವರಲ್ಲದ ಸುಮಾರು ಏಳು ಮಂದಿ ಸಚಿವರನ್ನು, ಸಚಿವ ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ.
ಆರ್. ಬಿ ತಿಮ್ಮಾಪುರ ಅವರು ನಿರ್ವಹಿಸುತ್ತಿರುವ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪವಿದ್ದು ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ, ಹಾಗಾಗಿ ಇವರನ್ನು ಸೇರಿದಂತೆ ಇಂತಹ ಇನ್ನು ಕೆಲವು ವಿವಾದಿತ ಹೇಳಿಕೆಗಳ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಚಿವರನ್ನು ಕೈ ಬಿಡಬಹುದು ಎಂದು ಮೂಲಗಳು ತಿಳಿಸಿವೆ.

