ಬೈಂದೂರು : ಇಂದು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮನ್ಮಹಾ ರಥೋತ್ಸವವು ಜರುಗಲಿದೆ.
ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ ಮೂಲಕ ಶುಭ ಕಾರ್ಯದ ಶುಭಾರಂಭವಾಗಲಿದೆ. ನಂತರದಲ್ಲಿ ಗಣಪತಿ ಹೋಮ, ಕಲಶಾಭಿಷೇಕ, ವಿಶೇಷ ಪಂಚಾಮೃತ, ವಿಶೇಷ ಮಹಾನೈವೇದ್ಯ, ಮಹಾಜನರಿಂದ ಪ್ರಾರ್ಥನೆ, ಸಂತರ್ಪಣೆ ಕಾರ್ಯಗಳು ನಡೆಯಲಿವೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಉಪ್ಪುಂದ ಕೊಡಿಹಬ್ಬವು ಒಂದಾಗಿರುತ್ತದೆ, ಪ್ರತಿವರ್ಷ ಕೋಟೇಶ್ವರದ ಕೊಡಿಹಬ್ಬದ ಮರುದಿನ ಉಪ್ಪುಂದದ ಕೊಡಿಹಬ್ಬ ನಡೆಯುವುದು ವಾಡಿಕೆ. ಆದರೆ ಈ ವರ್ಷ ಮಾತ್ರ ಕಳೆದ 40 ವರ್ಷಗಳಲ್ಲೆ ಮೊದಲ ಬಾರಿಗೆ ಕೋಟೇಶ್ವರದ ಕೊಡಿಹಬ್ಬಕ್ಕಿಂತ ಒಂದು ತಿಂಗಳು ಮುಂಚಿತವಾಗಿ ನಡೆಯುತ್ತಿದೆ.
ಧ್ವಜಾವರೋಹಣ, ಪೂರ್ಣಾಹುತಿ, ಪ್ರಸಾದ ವಿತರಣೆ ಹಾಗೂ ನಗರೋತ್ಸವ, ರಥೋತ್ಸವ ಜರುಗಲಿದೆ. ಸಂಜೆ ನಡೆಯುವ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ರಥ ಎಳೆದು ಸಂಭ್ರಮಿಸಲಿದ್ದಾರೆ.

