‘ಜೋಡಿಹಕ್ಕಿ’ ಧಾರವಾಹಿ ಖ್ಯಾತಿಯ ನಟ ತಾಂಡವ್ ರಾಮ್ ನನ್ನು, ಕೊಲೆ ಯತ್ನ ಆರೋಪದ ಕೇಸ್ನಲ್ಲಿ ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ಸಿನಿಮಾ ಅರ್ಧಕ್ಕೆ ನಿಂತ ಕಾರಣದಿಂದಾಗಿ ಮನನೊಂದು ಮುಗಿಲ್ ಪೇಟೆ ಸಿನಿಮಾದ ನಿರ್ದೇಶಕರಾದ ಭರತ್ ಮೇಲೆ ತಾಂಡವ್ ಗುಂಡು ಹಾರಿಸಿರುವುದರಿಂದ ಪೊಲೀಸರು ತಾಂಡವ್ ರಾಮ್ ನನ್ನು ಅರೆಸ್ಟ್ ಮಾಡಿದ್ದಾರೆ.
ಮುಗಿಲ್ ಪೇಟೆ’ ಸಿನಿಮಾದಲ್ಲಿ ತಾಂಡವ್ ರಾಮ್ ನಾಯಕನಾಗಿ ನಟಿಸುತ್ತಿದ್ದರು. ಕಾರಣಾಂತರಗಳಿಂದ ಈ ಸಿನಿಮಾ ಅರ್ಧಕ್ಕೆ ನಿಂತಿತ್ತು. ಈ ಕುರಿತು ಚಂದ್ರಲೇಔಟ್ನ ಕಚೇರಿಯಲ್ಲಿ ಮಾತುಕತೆ ನಡೆಯುತ್ತಿದ್ದ ಸಂದರ್ಭ ತಾಂಡವ್ಗೂ ಚಿತ್ರದ ನಿರ್ದೇಶಕ ಭರತ್ಗೂ ವಾಗ್ವಾದ ನಡೆದು ಈ ಸಂದರ್ಭ, ತಾಂಡವ್ ಸಿಟ್ಟಿನಿಂದ ಭರತ್ ಮೇಲೆ ಗುಂಡು ಹಾರಿಸಿದ್ದಾರೆ.
ಅದೃಷ್ಟವಶಾತ್ ಗುಂಡು ಡೈರೆಕ್ಟರ್ ಭರತ್ಗೆ ತಗುಲದೆ ಗೋಡೆಗೆ ತಗುಲಿದೆ. ಡೈರೆಕ್ಟರ್ ಭರತ್ ದೂರಿನ ಅನ್ವಯ ನಟ ತಾಂಡವ್ ರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

