ಉಡುಪಿ : ಎಂಜಿಎಂ ಕಾಲೇಜಿನಲ್ಲಿ ಅಮೃತಮಹೋತ್ಸವದ ಸಂಭ್ರಮವು ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ನಡೆಯಲಿದೆ ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿಯಾದ ಬಿ.ಪಿ. ವರದರಾಯ ಪೈ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೋಹನದಾಸ ಪೈ ಮೆಮೊರಿಯಲ್ ʼಅಮೃತ ಸೌದʼ ದ ಉದ್ಘಾಟನೆಯನ್ನು ಕಾಲೇಜು ಟ್ರಸ್ಟ್ ನ ಅಧ್ಯಕ್ಷರಾದ ಟಿ. ಸತೀಶ್ ಯು ಪೈ ನೇರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಕೃಷ್ಣಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಉಪಸ್ಥಿತರಿರುವರು. ಬೆಳಿಗ್ಗೆ 9:30ಗೆ ಜಿಲ್ಲಾಧಿಕಾರಿಯಾದ ಡಾಕ್ಟರ್ ಕೆ. ವಿದ್ಯಾ ಕುಮಾರಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿರುವರು, ಈ ಸಂದರ್ಭ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮವು ನಡೆಯಲಿದೆ.

ನವೆಂಬರ್ 30 ರಂದು ಬೆಳಗ್ಗೆ ನಡೆಯುವ ಶೋಭ ಯಾತ್ರೆಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀಕೃಷ್ಣ ಮಠದ ಆವರಣದಲ್ಲಿ ಜ್ಯೋತಿ ಹಸ್ತಾಂತರಿಸಲಿದ್ದಾರೆ.

ಡಿಸೆಂಬರ್ 1 ರಂದು ಬೆಳಿಗ್ಗೆ 9.00ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ನೀತಿ ಆಯೋಗದ ಸದಸ್ಯ ಹಾಗೂ ಹೈದರಾಬಾದ್ ಪವರ್ ಫೈನಾನ್ಸ್ ಕಾರ್ಪೊರೇಷನ್ ನ ಸಹ ಪ್ರೊ. ಪ್ರಸನ್ನ ತಂತ್ರಿ ಮುಖ್ಯ ಅತಿಥಿಯಾಗಲಿದ್ದಾರೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಯಶ್ ಪಾಲ್ ಸುವರ್ಣ, ಮಂಗಳೂರು ವಿ.ವಿ ಕುಲಪತಿಯಾದ ಪ್ರೊಫೆಸರ್ ಧರ್ಮ ಮತ್ತು ಪ್ರಾದೇಶಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೊ. ರಾಮೇಗೌಡ ಭಾಗವಹಿಸಲಿದ್ದಾರೆ.


ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಮಾಲತಿದೇವಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿ ದಾಸ ಎಸ್. ನಾಯ್ಕ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


1949 ರಲ್ಲಿ ಡಾ. ಟಿ.ಎಂ.ಎ ಪೈಗಳ ಕನಸಾಗಿ ಆರಂಭವಾದ ಉಡುಪಿಯ ಮೊತ್ತ ಮೊದಲ ಕಾಲೇಜು ಕಾಲೇಜು ಎಂ.ಜಿ.ಎಂ. ಪ್ರಸ್ತುತ ಈ ಕಾಲೇಜ್ ಗೆ 75 ವರ್ಷಗಳು ಪೂರೈಸಿವೆ.



















