ಉಡುಪಿ: ತುಳುನಾಡಿನ ರಾಜಧಾನಿ ಎಂದು ಪ್ರಸಿದ್ಧವಾಗಿರುವ ಬಾರ್ಕೂರಿನಲ್ಲಿ ಹೊಸಕೆರೆ ದೇವಸ್ಥಾನದ ಬಳಿ ಪ್ಲಾಸ್ಟಿಕ್ ರಾಶಿ ಬಿದ್ದಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಬಾರ್ಕೂರಿನ ಹೆಬ್ಬಾಗಿಲಾದ ಹೊಸಕೆರೆ ದೇವಸ್ಥಾನದ ಎದುರುಗಡೆ ಇರುವ ಸ್ಥಳವು ಬಾರ್ಕೂರಿಗೆ ಬರುವ ಪ್ರವಾಸಿಗರನ್ನು ಸ್ವಾಗತ ಕೋರಲು ನಿಂತಿರುವಂತಿದೆ. ತುಳುನಾಡ ರಾಜಧಾನಿ ಎನ್ನಲು ಬೇಸರವಾಗುತ್ತದೆ . ವೇದಿಕೆ ಮೇಲಿನ ಅಭಿವೃದ್ಧಿ ಒಂದು ಸಾರಿ ನಮ್ಮ ಸಾರ್ವಜನಿಕರಿಗೆ ತಲುಪಿದರೆ ನಮ್ಮ ಬಾರ್ಕೂರು ಇನ್ಯಾವುದೋ ಸ್ಥಿತಿಗೆ ತಲುಪುತ್ತಿತ್ತು. ಆದರೆ ಅಭಿವೃದ್ಧಿ ಎನ್ನುವುದು ವೇದಿಕೆಯಲ್ಲಿ ಮರೀಚಿಕೆಯಾಗಿ ಉಳಿದಿದೆ ಎಂದು ಬಾರ್ಕೂರು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ನಾಗರಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನೊಬ್ಬ ಸಾರ್ವಜನಿಕ ಅದಲ್ಲದೆ ನಾನೊಬ್ಬ ಗ್ರಾಮಪಂಚಾಯಿತಿ ಸದಸ್ಯ ಎಂದುಕೊಳ್ಳಲು ನಾಚಿಕೆಯಾಗುತ್ತದೆ. ಈ ಕಸದ ರಾಶಿಯನ್ನು ತೆಗೆಯಲು ಬಾರ್ಕೂರು ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ದೂರುಗಳನ್ನು ಸಾರ್ವಜನಿಕರು ನೀಡಿದರು ಕೂಡ ಪಂಚಾಯತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾವುದೇ ತಲೆಕೆಡಿಸಿಕೊಂಡಿಲ್ಲ ಅದು ಅಲ್ಲದೆ ಆ ಕಸದ ರಾಶಿ ಇರುವ ಜಾಗದಲ್ಲಿ ಹೊಸಕೆರೆ ಗಣಪತಿ ದೇವಸ್ಥಾನ ಕೂಡ ಇದೆ ಎಂದು ತಮ್ಮ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

