EVM ಬದಲು ಬ್ಯಾಲೆಟ್ ಪೇಪರ್ ಮತದಾನದ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
“ನೀವು ಚುನಾವಣೆಯಲ್ಲಿ ಗೆದ್ದಾಗ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಿರುವುದಿಲ್ಲ, ನೀವು ಚುನಾವಣೆಯಲ್ಲಿ ಸೋತಾಗ, ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗುತ್ತದೆ” ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿಬಿ ವರಾಳೆ ಪೀಠವು ಅರ್ಜಿದಾರರ ವಾದವನ್ನು ಟೀಕಿಸಿದೆ.
ಚಂದ್ರಬಾಬು ನಾಯ್ಡು ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಅಂತಹ ಪ್ರಮುಖ ನಾಯಕರು ಇವಿಎಂ ಟ್ಯಾಂಪರಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಎಂದು ಅರ್ಜಿದಾರರು ಪೀಠದ ಗಮನಸೆಳೆಯಲು ಪ್ರಯತ್ನಿಸಿದಾಗ ಸರ್ವೋಚ್ಚ ನ್ಯಾಯಾಲಯದ ಪೀಠವು, “ಚಂದ್ರಬಾಬು ನಾಯ್ಡು / ಜಗನ್ ಮೋಹನ್ ರೆಡ್ಡಿ ಸೋತಾಗ, ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಿದ್ದಾರೆ ಮತ್ತು ಅವರು ಗೆದ್ದಾಗ, ಅವರು ಇದರ ಬಗೆಗೆ ಏನನ್ನೂ ಹೇಳಲಿಲ್ಲ, ನಾವು ಇದನ್ನು ಹೇಗೆ ನಂಬಬಹುದು? ಎಂದು ಟೀಕಿಸಿದ್ದಾರೆ.
“ ಬ್ಯಾಲೆಟ್ ಪೇಪರ್ ಮತದಾನಕ್ಕೆ ಹಿಂತಿರುಗಿದರೆ, ಭ್ರಷ್ಟಾಚಾರ ನಡೆಯುವುದಿಲ್ಲವೇ?” ಎಂದು ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಿಗೆ ಪ್ರಶ್ನಿಸಿದೆ.

