ಪ್ರತಿಯೊಬ್ಬ ಮನುಷ್ಯನಿಗೂ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ತಲೆ ನೋವು ಕೂಡ ಒಂದು. ಕೆಲವರಲ್ಲಿ ದೀರ್ಘ ಕಾಲದ ತಲೆ ನೋವು ಕಾಣಿಸಿಕೊಂಡರೆ ಅದನ್ನು ಮೈಗ್ರೇನ್ ಎಂದು ತಿಳಿಯಲಾಗುತ್ತದೆ.
ಎಷ್ಟೋ ಜನರಿಗೆ ಈ ಮೈಗ್ರೇನ್ ತಲೆ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ, ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ವೈದ್ಯರು ಕೊಡುವ ಔಷಧಿಗಳನ್ನು ತೆಗೆದುಕೊಂಡರು ಸಹ ಪರಿಹಾರವಾಗುತ್ತಿಲ್ಲ ಎಂದು ನೊಂದುಕೊಳ್ಳುತ್ತಿರುತ್ತಾರೆ.
ಮೈಗ್ರೇನ್ ಸಮಸ್ಯೆಯು ಅನುವಂಶೀಯವಾಗಿ ಬರಬಹುದು ಎಂದು ವಿಜ್ಞಾನ ಹೇಳುತ್ತದೆ. ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಯಾರಾದರೂ ಮೈಗ್ರೇನ್ ಸಮಸ್ಯೆಯನ್ನು ಹೊಂದಿದ್ದರೆ ಆ ಸಮಸ್ಯೆ ನಿಮಗೂ ಬರಬಹುದಾದ ಸಾಧ್ಯತೆ ಇದೆ.
ಮೈಗ್ರೇನ್ ಸಮಸ್ಯೆಯ ಲಕ್ಷಣಗಳು
- ವಾಕರಿಕೆ
- ವಾಂತಿ
- ಕಣ್ಣುಗಳು ಮಂಜಾಗುವುದು
- ಕೈ ಕಾಲುಗಳು ಹಿಡಿದುಕೊಂಡಂತೆ ಮತ್ತು ಮುಳ್ಳು ಚುಚ್ಚಿದಂತೆ ಅನುಭವ ಆಗಬಹುದು.
- ಬೆಳಕು ಮತ್ತು ಶಬ್ದದ ಸೂಕ್ಷ್ಮತೆ ಕಾಣಬಹುದು
- ಕೆಲವರಿಗೆ ಪ್ರತಿ ದಿನವೂ ತಲೆ ನೋವು ಕಂಡು ಬಂದರೆ ಇನ್ನು ಕೆಲವರಿಗೆ ದಿನ ಬಿಟ್ಟು ದಿನ ತಲೆ ನೋವು ಕಾಣಿಸಬಹುದು.
ನಮ್ಮ ದೇಹದ ಕೆಲವೊಂದು ಭಾಗಗಳಲ್ಲಿ ಒತ್ತಡ ಹಾಕುವುದರಿಂದ ತಲೆ ನೋವುನ್ನು ನಿವಾರಣೆಯಲ್ಲಿ ಮಾಡಿಕೊಳ್ಳಬಹುದು. ಹೇಗೆಂದರೆ ನಮ್ಮ ದೇಹದ ನಿರ್ದಿಷ್ಟ ಭಾಗಗಳ ನರಮಂಡಲ ವ್ಯವಸ್ಥೆಯ ನರಗಳು ಕೊನೆಯಾಗಿರುತ್ತವೆ. ಇವುಗಳನ್ನು ಆಕ್ಯುಪ್ರೆಶರ್ ಪಾಯಿಂಟ್ ಎಂದು ಕರೆಯುತ್ತಾರೆ. ನಾವು ಈ ಭಾಗಗಳಲ್ಲಿ ಸ್ವಲ್ಪ ಹೊತ್ತು ಒತ್ತಿ ಹಿಡಿದು ಕೊಳ್ಳುವುದರಿಂದ ನಮ್ಮ ಮೈ ಕೈ ನೋವಿನ ಸಹಿತ ತಲೆ ನೋವು ಕಡಿಮೆಯಾಗುತ್ತದೆ.
ಮೈಗ್ರೇನ್ ತಲೆ ನೋವಿಗೆ ಪರಿಹಾರ ಕ್ರಮಗಳು :
ನೀವು ನಿಮ್ಮ ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯಭಾಗದಲ್ಲಿ ಸುಮಾರು 5 ರಿಂದ 6 ನಿಮಿಷಗಳ ಕಾಲ ಭದ್ರವಾಗಿ ಒತ್ತಿಹಿಡಿದು ಕೊಂಡಿರೆ ನಿಮ್ಮ ತಲೆನೋವು ಕಡಿಮೆಯಾಗುತ್ತದೆ. ನಿಮಗೆ ತಲೆನೋವು ಬಂದಾಗವೆಲ್ಲ ಇದೇ ರೀತಿ ಮಾಡಬಹುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ LI-4 ಪಾಯಿಂಟ್ ಎಂದು ಕರೆಯುತ್ತಾರೆ.
ವಾಕರಿಕೆ, ವಾಂತಿ ಮತ್ತು ದೀರ್ಘ ಕಾಲದ ತಲೆ ನೋವಿನ ಸಮಸ್ಯೆಯಿಂದ ನೀವು ಸಾಕಷ್ಟು ಬಳಲುತ್ತಿದ್ದರೆ, ನಿಮ್ಮ ಮಣಿಕಟ್ಟಿನ 1 ಇಂಚ್ ಮೇಲ್ಭಾಗದಲ್ಲಿ ಸ್ವಲ್ಪ ಹೊತ್ತು ಹಿಡಿದುಕೊಂಡರೆ ಆ ತಕ್ಷಣದಲ್ಲಿ ನಿಮ್ಮ ತಲೆ ನೋವು ಮಾಯವಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ PC6 ಪಾಯಿಂಟ್ ಎಂದು ಕರೆಯುತ್ತಾರೆ.
ಮೈಗ್ರೇನ್ ಸಮಸ್ಯೆಯನ್ನು ಮಸಾಜ್ ಮಾಡಿಕೊಳ್ಳುವ ಮೂಲಕವಾಗಿ ಸಹ ಪರಿಹಾರ ಮಾಡಿಕೊಳ್ಳಬಹುದು. ಮ ತ್ತು ಸ್ವಲ್ಪ ಶುಂಠಿ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದರಿಂದ ಮೈಗ್ರೇನ್ ಸಮಸ್ಯೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಶುಂಠಿ ಚಹಾ ಕೂಡ ಸೇವನೆ ಮಾಡಬಹುದು.
ತಲೆ ನೋವಿಗೆ ಪ್ರಮುಖ ಕಾರಣ ವೆಂದರೆ, ನಾವು ಅತಿಯಾಗಿ ಯಾವುದಾದರೂ ವಿಷಯಕ್ಕೆ ತಲೆ ಕೆಡಿಸಿಕೊಂಡು ಮಾನಸಿಕ ಒತ್ತಡಕ್ಕೆ ಒಳಗಾಗುವುದು, ಇದು ಮೈಗ್ರೇನ್ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ದೊರೆತರೆ ಮಾನಸಿಕ ಒತ್ತಡ ದೂರವಾಗುತ್ತದೆ.

