ಹೊಂಬಾಡಿ ಮಂಡಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಗುಡ್ಡೆಯಂಗಡಿಯಿಂದ ಪ್ರಸಿದ್ಧ ದೇವಸ್ಥಾನ ಗುಡ್ಡಟ್ಟು ವಿನಾಯಕ ದೇವಸ್ಥಾನದವರೆಗೆ ದಾರಿ ದೀಪ ಇಲ್ಲದಿರುವುದು ಕಳ್ಳರಿಗೆ ಸಹಾಯಕವಾದಂತಾಗಿದೆ.
ಕುಂದಾಪುರ ತಾಲೂಕಿನ ಶಿರಿಯಾರ, ಗುಡ್ಡಟ್ಟು, ಕರಿನಕಟ್ಟೆ ಕಲಮರ್ಗಿ ಇತರ ಕಡೆಗಳಲ್ಲಿ, ದಿನ ನಿತ್ಯ ಕಳ್ಳತನ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಉಪಯೋಗಿಸುವ ಪಂಪ್, ಗ್ರಾಮಪಂಚಾಯತ್ ಸಂಬಂಧ ಪಟ್ಟ ಸೊಲಾರ ದಾರಿದೀಪಗಳ ಕಳ್ಳತನ ನಡೆಯುತ್ತಲೆ ಇದೆ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳೀಯರು ಕಳ್ಳರನ್ನು ಹಿಡಿಯಲೆಂದೇ ಕಾಯುತ್ತಿದ್ದರು ಕಳ್ಳರು ಪತ್ತೆಯಾಗಿಲ್ಲ.
ಸ್ಥಳೀಯ ಗ್ರಾಮಪಂಚಾತ್ ಗಳಾದ ಶಿರಿಯಾರ, ಹುಂಬಾಡಿ ಮಂಡಾಡಿ, ಕೊರ್ಗಿ ಗ್ರಾಮಪಂಚಾಯತ್ ನವರು ಹೊಸ ದಾರಿದೀಪಗಳನ್ನು ಆಳವಡಿಸಿದರೆ ಇಂತಹ ಸಮಸ್ಯೆ ಬರುವುದಿಲ್ಲ ಎಂದು ಸ್ಥಳೀಯ ಸಮಾಜಸೇವಕ ಗುಡ್ಡಟ್ಟು ರವಿ ಮೋಗವೀರರವರು ದೂರಿದ್ದಾರೆ.

