ಮಂಗಳೂರು : ಸಂಚಾರ ನಿಯಮ ಉಲ್ಲಂಘನೆಯ ನಕಲಿ ಲಿಂಕ್ ಕಳುಹಿಸಿ ವ್ಯಕ್ತಿಯವರ ಖಾತೆಯಿಂದ 1.31 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿಕೊಂಡ ಘಟನೆ ನಡೆದಿದೆ.
ವ್ಯಕ್ತಿಯೋರ್ವರಿಗೆ +917878422870 ಈ ನಂಬರ್ ನಿಂದ ವಾಟ್ಸಪ್ ಮೆಸೇಜ್ ಬಂದಿದ್ದು ಅದರಲ್ಲಿ VAHAN PARIVAHAN.apk ಫೈಲಿತ್ತು. ಅದನ್ನು ಡೌನ್ಲೋಡ್ ಮಾಡಿದಾಗ ಅವರ ಮೊಬೈಲ್ ಗೆ 16 ಒಟಿಪಿಗಳು ಬಂದಿದ್ದವು, ಈ ಒಟಿಪಿಗಳನ್ನು ಯಾರಿಗೂ ಕಳುಹಿಸಿರಲಿಲ್ಲ, ಆದರೂ ಅವರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪೇ ಲೇಟರ್ ಮೂಲಕವಾಗಿ 30,400, 16,700, 71,496 ವರ್ಗಾವಣೆಯಾಗಿದೆ ಎಂಬ ಮೆಸೇಜ್ ಬಂದಿದೆ. ತಕ್ಷಣವೇ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದ್ದಾರೆ.
ಯಾರೋ ಅಪರಿಚಿತರು ಎಪಿಕೆಫೈಲ್ ನ ಮೂಲಕವಾಗಿ ಇವರ ಡೆಬಿಟ್, ಕ್ರೆಡಿಟ್ ಕಾರ್ಡ್ ನ ಮಾಹಿತಿ ಪಡೆದು ಫ್ಲಿಪ್ ಕಾರ್ಟ್ ನಲ್ಲಿ 39,398 ರೂಪಾಯಿ ಮೌಲ್ಯದ ಒಂದು ಪ್ಲಸ್ ಮೊಬೈಲ್, 32,398 ರೂಪಾಯಿ ಮೌಲ್ಯದ ಮೊಟೊರೊಲಾ ಎಜ್ ಮೊಬೈಲ್, 12,800 ಮೌಲ್ಯದ ಏರ್ಪೋಡ್ ಮೊದಲಾದವುಗಳನ್ನು ಹೊಸದಿಲ್ಲಿಯ ವಿಳಾಸದಲ್ಲಿರುವ ವ್ಯಕ್ತಿಗೆ ಆರ್ಡರ್ ಮಾಡಿಬಿಟ್ಟು 1,31,396 ವಂಚಿಸಿರುವುದರ ಬಗ್ಗೆ ಮಂಗಳೂರಿನ ಸೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

