ಕುಂದಾಪುರ : ಇಂದು ( ಡಿ. 11/12/2024) ನಡೆಯಬೇಕಿದ್ದ ಚೋರಾಡಿ ಸಾಂಪ್ರದಾಯಿಕ ಕಂಬಳವು ರದ್ದಾಗಿದೆ.
ಕಂಬಳ ನಡೆಸುವ ಮನೆತನದ ಹಿರಿಯರಾದ ಜಯರಾಮ ಹೆಗ್ಡೆ, ಕೆಲವು ದಿನಗಳ ಹಿಂದೆ ಇಹಲೋಕ ತ್ಯಜಿಸಿದ್ದು ಸೂತಕದ ಹಿನ್ನಲೆಯಲ್ಲಿ ಕಂಬಳವನ್ನು ರದ್ದುಪಡಿಸಲಾಗಿದೆ.
ಡಿ.15 ಕ್ಕೆ ಸೂತಕ ಮುಗಿಯಲಿದೆ. ಸಾಂಪ್ರದಾಯಿಕ ಕಂಬಳಗಳು ವೃಶ್ಚಿಕ ಸಂಕ್ರಮಾಣದಿಂದ ಧನು ಸಂಕ್ರಮಾಣದ ಒಳಗೆ ಮುಗಿಯಬೇಕು ಹಾಗಾಗಿ ಈ ಬಾರಿಯ ಚೋರಾಡಿ ಸಾಂಪ್ರದಾಯಿಕ ಕಂಬಳವು ರದ್ದುಪಡಿಸಲಾಗಿದೆ ಎಂದು ಕಂಬಳ ನಡೆಸುವ ಮನೆಯವರು ತಿಳಿಸಿದ್ದಾರೆ.

