ಹೊಟ್ಟೆ ಬೊಜ್ಜು ಕರಗಿಸುವುದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ?
ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಹೊಟ್ಟೆ ಬೊಜ್ಜು ಕಾಣಿಸಿಕೊಳ್ಳುತ್ತಿದೆ. ಬೊಜ್ಜಿನ ಕಾರಣದಿಂದಾಗಿ ಮಧುಮೇಹ, ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್ಗಳು ಇಂತಿವೆ :
ಮೊಟ್ಟೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಕರಗುವುದು. ಬಾದಾಮಿ, ಅಕ್ರೋಟ, ಗೋಂಡಬಿ, ಪಿಸ್ತಾ, ಚಿಯಾ ಬೀಜಗಳು ಇತ್ಯಾದಿ ಆರೋಗ್ಯಕಾರಿ ಪ್ರೋಟೀನ್ ಸೇವನೆಯಿಂದ ಕೊಬ್ಬು ಕರಗಿಸಿಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ.
ಬೀನ್ಸ್ ಕಾರ್ಬ್ಸ್ ಮತ್ತು ಪ್ರೋಟೀನ್ ನ ಸಮತೋಲನ ಕಾಪಾಡುವುದು ಮತ್ತು ದೀರ್ಘಕಾಲ ತನಕ ಹೊಟ್ಟೆಯು ತುಂಬಿರುವಂತೆ ಮಾಡುವುದು. ಕಪ್ಪು ಬೀನ್ಸ್, ಕಿಡ್ನಿ ಬೀನ್ಸ್, ಮಸೂರ, ಗಾರ್ಬಾಂಜೊ ಮತ್ತು ಕ್ಯಾನೆಲ್ಲಿನಿ ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಕರಗುತ್ತದೆ.
ಸಿಟ್ರಸ್ ಹಣ್ಣುಗಳು : ಲಿಂಬೆ, ಕಿತ್ತಳೆ, ದ್ರಾಕ್ಷಿ ಇದರಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ ಮತ್ತು ಇದು ತೂಕ ಕಳೆದುಕೊಳ್ಳಲು ಸಹಕಾರಿ ಆಗಿರುವುದು.
ಹೊಟ್ಟೆಯ ಕೊಬ್ಬು ಕರಗಿಸುವ ಮತ್ತೊಂದು ಆಹಾರವೆಂದರೆ ಅದು ಎಳೆ ನೀರು.
ಸಂಸ್ಕರಿಸಿರುವಂತಹ ಜಂಕ್ ಫುಡ್ ನ್ನು ಕಡೆಗಣಿಸಬೇಕು ಮತ್ತು ಇದರ ಬದಲಿಗೆ ತಾಜಾ ಆಹಾರ ಸೇವಿಸಿ.
ಸಾಧ್ಯವಿದ್ದಷ್ಟು ಮಟ್ಟಿಗೆ ನೈಸರ್ಗಿಕವಾದ ಸಕ್ಕರೆ ಸೇವಿಸಿ. ಆಹಾರ ಕ್ರಮದಲ್ಲಿ ಸಕ್ಕರೆ ಕಡೆಗಣಿಸಿ ಅಥವಾ ಕಡಿಮೆ ಮಾಡಿಕೊಳ್ಳಿ. ಇದರ ಬದಲಿಗೆ ಹಣ್ಣುಗಳನ್ನು ಬಳಸಿ.ಮನುಷ್ಯರಿಗೆ ಒತ್ತಡ ಹೆಚ್ಚಾದ ವೇಳೆ ದೇಹವು ಕಾರ್ಟಿಸಲ್ ಎನ್ನುವ ಹಾರ್ಮೋನ್ ನ್ನು ಬಿಡುಗಡೆ ಮಾಡುವುದು. ಇದು ಅತಿಯಾಗಿ ಉತ್ಪತ್ತಿಯಾದ ವೇಳೆ ದೇಹದ ತೂಕವು ಹೆಚ್ಚಾಗುವುದು. ಒತ್ತಡ ಮತ್ತು ನಿದ್ರಾಹೀನತೆಯು ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ನೀವು ದಿನವಿಡಿ ಕಚೇರಿಯಲ್ಲಿ ದಣಿದು ಬಂದ ಬಳಿಕ ಅಥವಾ ಒತ್ತಡ ನಿವಾರಣೆಗೆ ಬಿಸಿ ನೀರಿನ ಸ್ನಾನ ಮಾಡಿಕೊಳ್ಳಿ. ಇದೇ ರೀತಿಯಾಗಿ ಯೋಗ ಮತ್ತು ಧ್ಯಾನ ಮಾಡಿಯೂ ಒತ್ತಡ ನಿವಾರಣೆ ಮಾಡಬಹುದು.
ಆದರೆ ಹೊಟ್ಟೆಯ ಕೊಬ್ಬು ಕರಗಿಸಬೇಕಾದರೆ ನಿದ್ರೆಯು ಅತೀ ಅನಿವಾರ್. ಪ್ರತಿನಿತ್ಯ 7-9 ಗಂಟೆ ಕಾಲ ರಾತ್ರಿ ವೇಳೆ ನಿದ್ರಿಸಲೇಬೇಕು. ಇಲ್ಲದೆ ಇದ್ದರೆ ಅದು ನಿಮ್ಮ ದೇಹದ ತೂಕ ಹೆಚ್ಚು ಮಾಡುವುದು.
ಹೊಟ್ಟೆಯ ಕೊಬ್ಬು ಕರಗಿಸಬೇಕೆಂದಿದ್ದರೆ ಆಗ ನೀವು ಕ್ಯಾಲರಿ ದಹಿಸಿಕೊಳ್ಳುವುದು ಅತೀ ಅಗತ್ಯವಾಗಿ ಇರುವುದು. ನೀವು ಆಹಾರ ಕ್ರಮ ಪಾಳಿಸಿಕೊಂಡು ಹೋಗುವ ರೀತಿಯಲ್ಲೇ ವ್ಯಾಯಾಮ ಕೂಡ ಮಾಡಬೇಕು. ಇದರಿಂದ ಹೊಟ್ಟೆಯ ಕೊಬ್ಬು ಬೇಗನೆ ಕರಗುವುದು.

