ಬೆಳ್ಮಣ್ : ಕಾರ್ಕಳ ತಾಲೂಕಿನ ಸಂಕಲಕರಿಯ ಗೋಕುಲನಗರದ ನಿವಾಸಿಯಾಗಿರುವ ಆಜಿತ್ ಸೆರಾವೋ ಎಂಬ ಕ್ರೈಸ್ತ ಯುವಕ ತನ್ನ 18ನೇ ವರ್ಷದ ಶಬರಿಮಲೆ ಯಾತ್ರೆಗೆ ಮುಂದಾಗಿದ್ದಾನೆ.
ದಿ| ವಿಲಿಯಂ ಸೆರಾವೋ, ದುಲ್ಸಿನ್ ಸೆರಾವೋ ದಂಪತಿಯ ಅವಳಿ ಗಂಡು ಮಕ್ಕಳಲ್ಲಿ ಓರ್ವನಾದ ಅಜಿತ್ ಎಲೆಕ್ಟ್ರಿಕಲ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ .
18 ವರ್ಷಗಳ ಹಿಂದೆ ಪೊಳಲಿಯ ಗುರುಸ್ವಾಮಿಯೋರ್ವ ರಿಂದ ಪ್ರಭಾವಿತರಾಗಿ ಮಾಲೆ ಧರಿಸಲು ಪ್ರಾರಂಭಿಸಿದರು. ಕೊರೊನಾ ಸಂದರ್ಭ ದಲ್ಲೂ ಶಬರಿಮಲೆ ಯಾತ್ರೆಯನ್ನು ತಪ್ಪಿಸಲಿಲ್ಲ. ತಂದೆ ತೀರಿಕೊಂಡ ವರ್ಷ ಮಾತ್ರ ಮಾಲೆ ಧರಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಈ ಪುಣ್ಯ ಕಾರ್ಯಕ್ಕೆ ಮನೆಯವರು, ನೆರೆಹೊರೆಯವರು, ಎಲ್ಲ ಧರ್ಮದವರ ಬೆಂಬಲವಿದೆ. ಅಯ್ಯಪ್ಪನ ಮೇಲಿನ ಅಚಲ ಭಕ್ತಿ ನನ್ನದು ಎಂದು ಅಜಿತ್ ಅವರು ಹೇಳಿಕೊಂಡಿದ್ದಾರೆ.

