ಹೆಬ್ರಿ : ಕಾಲೇಜುವೊಂದರ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶೀನ(63) ಎಂಬವರು ಕುಸಿದು ಬಿದ್ದು ಮೃತಪಟ್ಟ ಘಟನೆ ಹೆಬ್ರಿಯಲ್ಲಿ ಸಂಭವಿಸಿದೆ.
ಬಡಗಮಿಜಾರು ಗ್ರಾಮದ ಕಾಲೇಜಿನಲ್ಲಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶೀನ ಅವರು, ಪ್ರತಿದಿನವು ಬಸ್ಸನ್ನು ಹೆಬ್ರಿಯಲ್ಲಿ ನಿಲ್ಲಿಸಿ ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಸೆ.07 ರಂದು ಬಸ್ಸನ್ನು ಹೆಬ್ರಿ ದೇವಸ್ಥಾನದ ಸಮೀಪ ನಿಲ್ಲಿಸಿ ಬೆಳಗ್ಗೆ ಮನೆಗೆ ಬಂದಿದ್ದು ಮರುದಿನದ ಸಂಜೆ ಹೆಬ್ರಿಗೆ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

